'ಗಡಿಯಲ್ಲಿ ಪರ ಭಾಷೆ ಪ್ರಭಾವಕ್ಕೆ ಕಡಿವಾಣ ಹಾಕಿ'
ಮುಳಬಾಗಲು: ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಕೆ.ಬಿ. ಮಾಣೆಕ್ಯಂ, ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಎನ್. ವೆಂಕಟರವಣಪ್ಪ ತಾಲೂಕು ಭೂಬ್ಯಾಂಕ್ ಅಧ್ಯಕ್ಷ ಎಂ.ಸಿ. ನೀಲಕಂಠೇಗೌಡ ಮತ್ತು ಕನ್ನಡ ಪರ ಹೋರಾಟಗಾರ ಮು.ಕೃ. ಪದ್ಮನಾಭರಾವ್ ಅವರನ್ನು ಸನ್ಮಾನಿಸಲಾಯಿತು. ತಹಸೀಲ್ದಾರ್ ಡಿ.ವಿ. ರಾಮಮೂರ್ತಿ ಮೆರವಣೆಗೆಗೆ ಉದ್ಘಾಟನೆ ಮಾಡಿ, ಕನ್ನಡ ಭಾಷೆಯನ್ನು ಉಳಿಸಿ ಬೆಳಸುವುದು ಕನ್ನಡಿಗರ ಕೈಯಲ್ಲಿದೆ ಎಂದರು. ಕೋ.ವೆಂ. ರಾಮಕೃಷ್ಣೇಗೌಡ, ತಾಪಂ ಅಧ್ಯಕ್ಷೆ ಸುಬ್ಬಮ್ಮ, ಸದಸ್ಯೆ ಲಕ್ಷ್ಮಿದೇವಮ್ಮ, ಉತ್ತನೂರು ಶ್ರೀನಿವಾಸ್, ಜಿ. ರಾಮಲಿಂಗಾರೆಡ್ಡಿ, ನೀಲಕಂಠೇಗೌಡ, ಜೆಮಿನಿ ರಮೇಶ್, ಕನ್ನಡಭಟ ವೆಂಕಟಪ್ಪ, ಚಾಂದ್ ಪಾಷ ಇದ್ದರು.