ತಮಿಳು ಸಂಘದಿಂದ ರಾಜ್ಯೋತ್ಸವ
ಕೆಜಿಎಫ್: ಗಡಿ ಪ್ರದೇಶದ ಕೆಜಿಎಫ್ ಚಿನ್ನದ ಗಣಿ ಪ್ರದೇಶದಲ್ಲಿ ತಮಿಳು ಕನ್ನಡ ಎಂಬ ಭಾಷೆ ಬೇಧವಿಲ್ಲದೆ ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದೇವೆ ಎಂದು ತಮಿಳು ಸಂಘದ ಅಧ್ಯಕ್ಷ ಕಲೈಅರಸನ್ ಹೇಳಿದರು. ಕೆಜಿಎಫ್ ತಮಿಳು ಸಂಘದ ಆವರಣದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ, ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದ ಅವರು, ಕೆಜಿಎಫ್ನಲ್ಲಿ ಕನ್ನಡ, ತಮಿಳು ಮತ್ತು ಆಂಗ್ಲಭಾಷೆಯಲ್ಲಿ ಬ್ಯಾನೆರ್ಗಳನ್ನು ಅಳವಡಿಸುತ್ತಾ ಬಂದಿದ್ದು ಭಾಷೆಯ ವಿಷಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೆ ಶಾಂತಿ ಸಹಬಾಳ್ವೆಯಿಂದ ಜೀವಿಸುತ್ತಾ ಬಂದಿದ್ದೇವೆ ಎಂದರು. ನವಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷ ವಳ್ಳಲ್ ಮುನಿಸ್ವಾಮಿ, ತಮಿಳು ಸಂಘದ ಕೃಷ್ಣಕುಮಾರ್, ನಾಸುಮಣಿ, ಶ್ರೀಧರ್, ತಿರುಮುರುಗನ್, ಕರ್ಣಾ, ಕುಮಾರಸ್ವಾಮಿ, ಅಪ್ಪುಜಯಕುಮಾರ್, ಶೇಖರ್, ಪ್ರಸಾದ್, ಮಯಳಗನ್ ಹಾಜರಿದ್ದರು.