ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮಾಲೂರಿನಲ್ಲಿ ರಾಜ್ಯೋತ್ಸವ

Rashmi Kasaragodu
Updated On : 2 Nov 2013, 12:49 pm

ಮಾಲೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರವೇ ನೇತೃತ್ವದಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ತಾಯಿ ಭುವನೇಶ್ವರಿಯ ಮೆರವಣಿಗೆಗೆ ತಹಸೀಲ್ದಾರ್ ಡಾ. ಸುಧಾ ಕನ್ನಡ ಬಾವುಟ ಹಾರಿಸುವ ಮೂಲಕ ಚಾಲನೆ ನೀಡಿದರು. ಪಟ್ಟಣದ ಮಿನಿ ವಿಧಾನ ಸೌಧದ ಮುಂಭಾಗದಿಂದ ಆರಂಭಗೊಂಡ ಭುವನೇಶ್ವರಿ ತಾಯಿಯ ಪಲ್ಲಕ್ಕಿ ವಾಹನಕ್ಕೆ ಸಾರಥಿಯಾಗಿದ್ದ ಶಾಸಕ ಮಂಜುನಾಥ್ ಗೌಡರು ಭುವನೇಶ್ವರಿಗೆ ಪೊಜೆ ಸಲ್ಲಿಸಿದರು. ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಭಾಗವಹಿಸಿದ್ದವು. ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳು ಸ್ಥಬ್ದ ಚಿತ್ರ ಪ್ರದರ್ಶಿಸಿದವು. ಮೆರವಣಿಗೆಯಲ್ಲಿ ಜಿಪಂ ಸದಸ್ಯರಾದ ರಾಮಸ್ವಾಮಿ ರೆಡ್ಡಿ, ಯಲ್ಲಮ್ಮ, ಇಒ ಸಂಜೀವಪ್ಪ, ಮಧುಸೂಧನ್, ರಾಮಮೂರ್ತಿ, ಆಂಜಿ, ಅಲೂಮಂಜು, ಮಂಜುನಾಥ್ಗೌಡ, ಎಸ್.ಎಂ. ರಾಜು, ಬಡಗಿ ಶ್ರೀನಿವಾಸ್, ಪ್ರಸನ್ನ ಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement