ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶಾಲೆ ಮಕ್ಕಳಿಗೆ 'ಗೋದಿ ಭಾಗ್ಯ' ವಿತರಣೆ

Rashmi Kasaragodu
Updated On : 2 Nov 2013, 12:46 pm


ಬಂಗಾರಪೇಟೆ: ಗ್ರಾಮೀಣ ಮಕ್ಕಳಿಗೆ ಶಿಕ್ಷಣದ ಜೊತೆ ಅವರ ಬುದ್ಧಿ ಮಟ್ಟವನ್ನು ಹೆಚ್ಚಿಸಲು ಪೌಷ್ಟಿಕಾಂಶವುಳ್ಳ ಆಹಾರ ನೀಡಲು ಸರ್ಕಾರ ನಿರ್ಧರಿಸಿದ್ದು ರಾಜೋತ್ಸವ ಪ್ರಯುಕ್ತ ಗೋದಿ ಭಾಗ್ಯ ವಿತರಿಸಿದ್ದು ಇದರಿಂದ ಮಕ್ಕಳ ಶಾಲೆಗಳಿಗೆ ಹಾಜರಾತಿ ಹೆಚ್ಚಳವಾಗಲಿದೆ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು.
ಪಟ್ಟಣ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಗೋದಿಯಿಂದ ತಯಾರಿಸಿದ ತಿನಿಸುಗಳನ್ನು ಸ್ವತಃ ತಾವೇ ಮಕ್ಕಳೊಂದಿಗೆ ಕೂತು ತಿನ್ನುವ ಮೂಲಕ ಚಾಲನೆ ನೀಡಿದ ಬಳಿಕ ಮಾತನಾಡುತ್ತಾ ಅಕ್ಷರದಾಸೋಹದಲ್ಲಿ ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಮಧ್ಯಾಹ್ನದ ಬಿಸಿಯೂಟದಲ್ಲಿ  ಚಿತ್ರಾನ್ನ, ಬಿಸಿ ಬೇಳೆ ಬಾತ್, ಅನ್ನ ಸಾಂಬರೆ ಸೇವಿಸುತ್ತಿದ್ದ ಮಕ್ಕಳು ಇನ್ನು ಮುಂದೆ ಗೋದಿಯಿಂದ ತಯಾರಿಸುದ ಚಪಾತಿ, ಪೂರಿ ಪಾಯಸಗಳನ್ನು ಸವಿಯಬಹುದು. ರಾಜ್ಯದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಬಡತನವಿದ್ದು ಮಕ್ಕಳು ಇದರಿಂದ ಶಾಲೆಗಳಿಂದ ದೂರ ಉಳಿಯುವಂತಾಗಿದ್ದು ಅವರನ್ನು ಮತ್ತೆ ಶಾಲೆಗಳತ್ತ ಕರೆತರುವ ಸಲುವಾಗಿ ಈ ವಿನೂತನ ಯೋಜನೆಗಳನ್ನು ಜಾರಿಗೊಳಿಸಿದ್ದು ಮುಂದೆ ಕೋಳಿ ಮಟ್ಟ ಸಹ ನೀಡಲಾಗುವುದು ಇದನ್ನು ಬಳಸಿಕೊಂಡು ಅಕ್ಷರ ಭಾಗ್ಯ ಪಡೆದು ದೇಶದ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗುವಂತೆ ಕೋರಿದರು.
ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಕೆ. ಚಂದ್ರಾರೆಡ್ಡಿ, ವೆಂಕಟೇಶಗೌಡ, ಗುಲ್ಜಾರ್, ಬಿಇಒ ಕೆ. ಜಯರಾಜ್,ಬಿಆರ್ಪಿ ಶ್ರೀನಿವಾಸ್, ಮುಖ್ಯಶಿಕ್ಷಕಿ ಮರಿಯಮ್ಮ, ಮುನಿಸ್ವಾಮಿ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement