ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಕರೆ
ಮಾಲೂರು: ತಿಗಳ ಸಮುದಾಯ ಎಲ್ಲ ರೀತಿಯಾಗಿ ಹಿಂದುಳಿದಿರುವುದು ದುರಾದೃಷ್ಟಕರ ಎಂದು ತಿಗಳ ವಹ್ನಿಕುಲ ಕ್ಷತ್ರೀಯ ಸಂಘದ ಪೋಷಕ ರಾಜೇನಹಳ್ಳಿ ಶ್ರೀನಿವಾಸ್ ಹೇಳಿದರು.
ಪಟ್ಟಣದ ಧರ್ಮರಾಯ ಕಲ್ಯಾಣ ಮಂಟಪದಲ್ಲಿ ತಾಲೂಕು ವಹ್ನಿಕುಲ ಕ್ಷತ್ರೀಯ ನೌಕರರ ಕ್ಷೇಮಾಭಿವೃದ್ಧಿ ಸಂಘದ 14 ನೇ ವರ್ಷದ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮುದಾಯದವರು ಮಕ್ಕಳ ಶೈಕ್ಷಣಿಕ ಅಬಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದಾಗ ಸಾಮುದಾಯ ಬೆಳೆಯಲು ಸಾಧ್ಯ ಎಂದರು.
ಪುರಸಭೆ ಹಿರಿಯ ಸದಸ್ಯ ಸಿದಸ್ಯ ಸಿ.ಪಿ. ನಾಗರಾಜ್ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳು ಹಣದ ವ್ಯಾಮೋಹದಲ್ಲಿ ವಿದೇಶಕ್ಕೆ ಹೋಗುತ್ತಿರುವುದರಿಂದ ದೇಶದ ಅಭಿವೃದ್ಧಿ ಕುಂಠಿಟವಾಗುತ್ತಿದೆ ಎಂದರು. ನೂತನವಾಗಿ ಪುರಸಭೆ ಸದಸ್ಯರಾಗಿ ಆಯ್ಕೆಯಾದ ರಾಮಮೂರ್ತಿ,ಪಚ್ಚಪ್ಪ, ಶ್ರೀವಲ್ಲಿ ರಮೇಶ್, ಮೀನಾ ಆಂಜಿನಪ್ಪ, ಗ್ರಾಪಂ ಅಧ್ಯಕ್ಷ ಆರ್. ನಾಗರಾಜ್, ಭಾಗ್ಯಮ್ಮ ಮುನಿರಾಜು, ಜಯಲಕ್ಷ್ಮಮ್ಮ, ಕೆ.ಆರ್. ರಾಜಪ್ಪ, ನಿವೃತ್ತ ಶಿಕ್ಷಕ ಎ.ವಿ. ಮುನಿಯಪ್ಪ, ಕರವೇ ಕಾರ್ಯಧ್ಯಕ್ಷ ಬ. ಶ್ರೀನಿವಾಸ್, ಲಕ್ಕೂರು ಶ್ರೀನಿವಾಸ್, ಮಾಲೂರು ರವಿ, ಪಿ. ವೆಂಕಟೇಶ್ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎಂ.ವಿ. ನಾರಾಯಣಸ್ವಾಮಿ, ಈಶ್ವರ್, ಜಿ.ವಿ. ಕುಮಾರ್, ಎ. ಕೃಷ್ಣಪ್ಪ ಇದ್ದರು.