ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೇಳುವವರಿಲ್ಲ ಗ್ರಾಮೀಣ ಭಾಗದ ಕೆಂಪು ಬಸ್ ಸ್ಥಿತಿ

Mainashree
Updated On : 4 Nov 2013, 12:25 pm

ಚಿಂತಾಮಣಿ: ಗ್ರಾಮೀಣ ಮಾರ್ಗದ ಕೆಂಪು ಬಸ್ಸುಗಳ ಮಿತಿ ಮೀರಿದ ತಾಂತ್ರಿಕ ದೋಷದಿಂದಾಗಿ ತಳ್ಳುವ ಪ್ರಕ್ರಿಯೆ ದಿನ ನಿತ್ಯ ನಗರದ ಬಸ್ ನಿಲ್ದಾಣದಲ್ಲಿ ಕಾಣುವ ದೃಶ್ಯವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ತಾಲೂಕಿನ ವಿವಿಧ ಗ್ರಾಮೀಣ ಪ್ರದೇಶಗಳಿಗೆ ಸಂಚರಿಸುವ ಕೆಂಪು ಬಸ್ಸುಗಳಲ್ಲಿ ಸ್ವಚ್ಛತೆ ಹಾಗೂ ಸರಿಯಾದ ನಿರ್ವಹಣೆ ಇಲ್ಲದ ಕಾರಣ ಚಾಲನೆ ಮಾಡಲು ಯೋಗ್ಯವಿಲ್ಲವೆಂಬ ಆರೋಪ ಪ್ರಯಾಣಿಕರಿಂದ ಕೇಳಿ ಬರುತ್ತಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೇ ದೊಡ್ಡ ತಾಲೂಕಾದ ಚಿಂತಾಮಣಿ ನಗರ ವಾಣಿಜ್ಯ ಕೇಂದ್ರವಾಗಿದ್ದು, ಇಲ್ಲಿಗೆ ವ್ಯಾಪಾರ ವಹಿವಾಟುಗಾಗಿ ಬರುವ ಜನರ ಸಂಖ್ಯೆ ಹೆಚ್ಚಾಗಿದೆ. ಇದನ್ನು ಅರಿಯದ ಅಧಿಕಾರಿಗಳು ಹಳೇ ಮಾಡೆಲ್‌ನ ಬಸ್ಸುಗಳನ್ನು ನೀಡಿರುವುದರಿಂದ ಸ್ಟಾರ್ಟಿಂಗ್ ಟ್ರಬಲ್‌ನಿಂದ ನಿಂತಲ್ಲೇ ನಿಂತು ಸಾರ್ವಜನಿಕರು ಬಸ್ಸನ್ನು ತಳ್ಳುವುದು ನಿತ್ಯ ಕಾಯಕವಾಗಿದೆ. ಇನ್ನು ಮುಂದಾದರೂ ಸಂಬಂಧಪಟ್ಟ ಜಿಲ್ಲಾ ಸಾರಿಗೆ ವಿಭಾಗದ ವ್ಯವಸ್ಥಾಪಕರು ಇತ್ತ ಗಮನ ಹರಿಸಿ ಗ್ರಾಮೀಣ ಪ್ರಯಾಣಿಕರ ಸಮಸ್ಯೆ ಪರಿಹರಿಸಲು ಮುಂದಾಗಲಿ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement