ಚಿಕ್ಕಬಳ್ಳಾಪುರ; ಬೆಳಕಿನ ಹಬ್ಬದ ಸಂಭ್ರಮ
ಚಿಕ್ಕಬಳ್ಳಾಪುರ: ಎಲ್ಲೆಡೆ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದ್ದು ಪಟಾಕಿಗಳ ಆರ್ಭಟದ ನಡುವೆ ಅದ್ಧೂರಿಯಾಗಿ ಹಬ್ಬವನ್ನು ಆಚರಿಸಲಾಗುತ್ತಿದೆ.
ಎಂದಿನಂತೆ ಮಹಿಳೆಯರು ನಗರದ ಗಂಗಮ್ಮನ ಗುಡಿಗೆ ತೆರಳಿ ಪೂಜೆ ಸಲ್ಲಿಸಿದರು. ಕಜ್ಜಾಯ ಮತ್ತು ನೋಮದಾರಗಳನ್ನು ತೆಗೆದುಕೊಂಡು ಗಂಗಾಮಾತೆಗೆ ಅರ್ಪಿಸುವ ಮೂಲಕ ಹರಕೆಯನ್ನು ಹೊತ್ತರು. ಇದರಿಂದ ಆಲಯದ ಮುಂದೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ತುಂಬಿ ತುಳುಕಾಡುತ್ತಿದ್ದು ಗಂಗಾಮಾತೆಗೆ ವಿಶೇಷ ಅಭಿಷೇಕ ಮತ್ತು ಅಲಂಕಾರದ ಜತೆಗೆ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇನ್ನೂ ಪಟಾಕಿ ಮಾರಾಟಗಾರರು ಭರ್ಜರಿ ವ್ಯಾಪಾರ ನಡೆಸುತ್ತಿದ್ದು ಪಟಾಕಿಗಳನ್ನು ಕೊಂಡುಕೊಳ್ಳಲು ಜನ ಮುಗಿ ಬಿದ್ದು ಭಾನುವಾರ ಎಲ್ಲೆಡೆ ಪಟಾಕಿಗಳು ಆರ್ಭಟಿಸಿದವು.