ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪೊಲೀಸ್ ಇಲಾಖೆ ವೈಫಲ್ಯ; ಸಾರ್ವಜನಿಕರ ಆಕ್ರೋಶ

Mainashree
Updated On : 4 Nov 2013, 12:25 pm

ಕೆಜಿಎಫ್: ಕೆಜಿಎಫ್ ಪೊಲೀಸ್ ಜಿಲ್ಲೆ ವ್ಯಾಪ್ತಿಯಲ್ಲಿ ನಿರಂತರವಾಗಿ ಕಳ್ಳತನ, ಸುಲಿಗೆ, ಅತ್ಯಾಚಾರ, ಅಪಹರಣ, ಕೊಲೆ, ದರೋಡೆ ವಾಹನಗಳ ಕಳ್ಳತನ ಸೇರಿದಂತೆ ಪ್ರತಿನಿತ್ಯ ಹಲವಾರು ಅಪರಾಧ ಪ್ರಕರಣ  ದಾಖಲಾಗುತ್ತಿದ್ದು, ಸಾರ್ವಜನಿಕರು ಇಲಾಖೆಯ ವೈಫ್ಯಲ್ಯತೆ ಖಂಡಿಸಿದ್ದಾರೆ.
ಪೊಲೀಸ್ ಇಲಾಖೆ ತಮ್ಮ ಕರ್ತವ್ಯ ಮರೆತು ಅಪರಾಧ ಪ್ರಕರಣಗಳಿಗೆ ಕುಮ್ಮಕ್ಕು ನೀಡುವುದಲ್ಲದೆ ಕಳ್ಳರೊಂದಿಗೆ ಶಾಮೀಲಾಗಿದ್ದಾರೆ ಸಾರ್ವಜನಿಕರು ನೇರವಾಗಿ ಆರೋಪಿಸಿದ್ದಾರೆ.   
ಇದಕ್ಕೆ ಉದಾಹರಣೆ ಎಂಬಂತೆ ಇತ್ತೀಚೆಗೆ ಕೆಜಿಎಫ್ ಕ್ಷೇತ್ರದ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳ್ಳತನ, ಸುಲಿಗೆ, ಅತ್ಯಾಚಾರ, ಅಪಹರಣ, ಕೊಲೆ, ದರೋಡೆ ವಾಹನ ಕಳ್ಳತನ ಸೇರಿದಂತೆ ಹಲವಾರು ಅಪರಾಧ  ಪ್ರಕರಣಗಳು ನಿರಂತರವಾಗಿ ನಡೆಯುತ್ತಲೇ ಇದ್ದರೂ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ  ಅಪರಾಧಿಗಳನ್ನು ಪತ್ತೆಹಚ್ಚುವುದಾಗಲಿ, ಅಥವಾ ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳದೆ, ಅವರಿಂದ ಎಷ್ಟು ಲಂಚ ಪಡೆಯಬೇಕು ಎಂಬುದರಲ್ಲೇ ಪೊಲೀಸ್ ಅಧಿಕಾರಿಗಳು ಮಗ್ನರಾಗಿದ್ದಾರೆ ಎಂಬುದು ಸಾರ್ವಜನಿಕರ ಆರೋಪ.  
ಮಾರಿಕುಪ್ಪಂ ಪೊಲೀಸ್ ಠಾಣಾ ವೃತ್ತ ನಿರೀಕ್ಷಕರೊಬ್ಬರು ಬಿಜಿಎಂಎಲ್ ಚಿನ್ನದಗಣಿ ಕಳವು ಪ್ರಕರಣದಲ್ಲಿ 17 ಮಂದಿ ಕಳ್ಳರನ್ನು ಪೊಲೀಸರು ಬಂಧಿಸಿದ್ದು ಅವರೊಂದಿಗೆ ಸಂಭಾಷಣೆ ಮಾಡಿ ಕಳುವಿಗೆ ಹಣ ಪಡೆದ ಹಿನ್ನಲೆಯಲ್ಲಿ ವೃತ್ತ ನಿರೀಕ್ಷಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಸೇವೆಯಿಂದ ಅಮಾನತು ಮಾಡಲಾಗಿತ್ತು.
ಅದೇ ರೀತಿ ಕಳ್ಳತನ ಪ್ರಕರಣದಿಂದ ಕೈಬಿಡಲು ವ್ಯಕ್ತಿಯಿಂದ ಬೇತಮಂಗಲ ಪಿಎಸ್‌ಐ ಒಬ್ಬರು ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತರ ಬಲೆಗೆ ಬಿದ್ದು ಸೇವೆಯಿಂದ ಅಮಾನತುಗೊಂಡಿದ್ದಾರೆ. ಕಾನೂನನ್ನು ಪರಿಪಾಲನೆ ಮಾಡುವ ಮತ್ತು ಸಾರ್ವಜನಿಕರನ್ನು ರಕ್ಷಿಸುವ ಕಾರ್ಯವನ್ನು ನಿರ್ವಹಿಸುತ್ತಿರುವ ಪೊಲೀಸರೇ ಇಂತಹ ಕೃತ್ಯಗಳಿಗೆ ಮುಂದಾಗಿರುವುದನ್ನು ನೋಡಿದರೆ ವರಿಷ್ಠಾಧಿಕಾರಿಗಳ ಆಡಳಿತ ನಿರ್ವಹಣೆ  ವೈಫಲತೆ ಕ್ಷೇತ್ರದ ಜನರಲ್ಲಿ ಅಸಮಾಧಾನ ಮಡುಗಟ್ಟುವಂತೆ ಮಾಡಿದೆ.
ಇನ್ನೊಂದೆಡೆ ವಿಶೇಷ ಸಂಗತಿ ಎಂದರೆ ಬಿಜಿಎಂಎಲ್ ಚಿನ್ನದ ಗಣಿ ಕಳವು ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆದಿರುವ ವೃತ್ತ ನಿರೀಕ್ಷಕ ಅಬ್ದುಲ್ ಸಲೀಂ ಪ್ರಕರಣದ ತನಿಖಾಧಿಕಾರಿ, ಉಪ ರಕ್ಷಣಾಧಿಕಾರಿ ಹೆಚ್.ಪಿ.ರಾಜಣ್ಣ ವಿರುದ್ಧವೇ ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಕೇಂದ್ರ ವಲಯ ಐಜಿಪಿ ಅವರಿಗೆ ದೂರು ನೀಡಿರುವುದು ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement