ಮಂಜೂರಾತಿ ಸ್ಥಳದಲ್ಲೇ ಕೆಳಸೇತುವೆ ನಿರ್ಮಿಸಿ; ಕೇಂದ್ರ ಸಚಿವ ಮುನಿಯಪ್ಪ
ಶಿಡ್ಲಘಟ್ಟ: ನಾಗರಿಕರಿಗೆ ಅನುಕೂಲವಾಗುವಂತೆ ಮಂಜೂರಾಗಿರುವ ಸ್ಥಳದಲ್ಲೇ ಕೆಳಸೇತುವೆ ನಿಮರಾಣ ಮಾಡಿಕೊಡುವಂತೆ ಕೇಂದ್ರ ಸಚಿವ
ಕೆ.ಎಚ್.ಮುನಿಯಪ್ಪ ರೈಲ್ವೆ ಕಾರ್ಯಪಾಲಕ ಅಭಿಯಂತರ ಅಮರಗುಂಡಪ್ಪನವರಿಗೆ ಸೂಚಿಸಿದರು.
ಉದ್ದೇಶಿತ ಜಾಗ ಹೊರತುಪಡಿಸಿ ಕೆಳಸೇತುವೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲು ಮುಂದಾಗಿದ್ದ ರೇಲ್ವೆ ಕಾರ್ಯಪಾಲಕ ಅಭಿಯಂತರ ವಿರುದ್ಧ ನಾಗರಿಕರು ಪ್ರತಿಭಟನೆ ನಡೆಸಿದ್ದ ಹಿನ್ನೆಲೆಯಲ್ಲಿ ಪಟ್ಟಣಕ್ಕೆ ಭೇಟಿ ನೀಡಿದ್ದರು.
ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ರಸ್ತೆ ಸೌಲಭ್ಯ ಕಲ್ಪಿಸಲುಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ರಸ್ತೆ ಸೌಲಭ್ಯ ಕಲ್ಪಿಸಲು ಕೆಳಸೇತುವೆ ನಿರ್ಮಿಸಬೇಕೆಂದು ಮಾಡಿದ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ ಹಾಗೂ ಮಾಜಿ ಸಚಿವ ವಿ.ಮುನಿಯಪ್ಪ ಈಗ ನಡೆದಿರುವ ಕಾಮಗಾರಿಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ ಕೆಳಸೇತುವೆ ನಿರ್ಮಾಣಕ್ಕೆ ಅಮರ್ ಗುಂಡಪ್ಪ ಅವರಿಗೆ ಸೂಚಿಸಿದರು. ಜಿಪಂ ಸದಸ್ಯರಾದ ಎಸ್.ಎಂ.ನಾರಾಯಣಸ್ವಾಮಿ, ಕಂಬದಹಳ್ಳಿ ಸತೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.