ರಾಷ್ಟ್ರೀಯ ಏಕತೆ ಅವಶ್ಯ: ಡಿ.ಕೆ. ರವಿ
ಕೋಲಾರ: ಪ್ರತಿಯೊಬ್ಬರು ರಾಷ್ಟ್ರ ಪ್ರೇಮ ಬೆಳೆಸಿಕೊಂಡು ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಬೇಕೆಂದು ಜಿಲ್ಲಾಧಿಕಾರಿ ಡಿ.ಕೆ. ರವಿ ಕರೆ ನೀಡಿದರು.ಅವರು ಜೂನಿಯರ್ ಕಾಲೇಜು ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸಂಕಲ್ಪ ದಿನಾಚರಣೆ ಸಭೆಯಲ್ಲಿ ಮಾತನಾಡುತ್ತಿದ್ದರು.ಭಾರತ ದೊಡ್ಡ ರಾಷ್ಟ್ರ ವಿಶ್ವದಲ್ಲಿಯೇ ಆರ್ಥಿಕ ಕ್ಷೇತ್ರದಲ್ಲಿ ಮುನ್ನಡೆಯಲ್ಲಿದೆ. ನಮ್ಮದು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ, ನಮ್ಮ ಸಂವಿಧಾನದಲ್ಲಿ ಮೂಲ ಹಕ್ಕುಗಳು ಒಳಗೊಂಡಿವೆ. ಜನರ ಅನುಕೂಲಕ್ಕೆ ತಕ್ಕಂತೆ ಸಂವಿಧಾನವನ್ನು ಮಾರ್ಪಾಡು ಮಾಡುವ ಅವಕಾಶವನ್ನು ಸಹಾ ಕಲ್ಪಿಸಲಾಗಿದೆ.ನಮ್ಮ ರಾಷ್ಟ್ರದಲ್ಲಿ ಬಹುಭಾಷ ಜನರಿದ್ದಾರೆ. ವಿವಿಧ ಜಾತಿ, ಜನಾಂಗ ಮತ್ತು ಧರ್ಮದವರಿದ್ದಾರೆ. ಎಲ್ಲರೂ, ದೇಶಭಕ್ತಿ, ತ್ಯಾಗ ಬಲಿದಾನ ರೂಢಿಸಿಕೊಳ್ಳಬೇಕು. ನಾವೆಲ್ಲರೂ ಭಯೋತ್ಪಾದನೆ ವಿರುದ್ಧ ಹೋರಾಡುವ ಧೈರ್ಯ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.ರಾಷ್ಟ್ರೀಯ ಸಂಕಲ್ಪ ದಿನಾಚರಣೆ ಅಂಗವಾಗಿ ಚಿನ್ಮಯ ವಿದ್ಯಾಲಯ ಮಕ್ಕಳಿಂದ ಭಗವದ್ಗೀತೆ, ಪಾದ್ರಿ ದೂಳಪ್ಪನವರಿಂದ ಬೈಬಲ್ ವಾಚನ, ಮೌಲ್ವಿಯಿಂದ ಕುರಾನ ಪಠಣ ನಡೆಯಿತು.ಕಾರ್ಯಕ್ರಮದಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್. ಜುಲ್ಫಿಖಾರ್ ಉಲ್ಲಾ, ನಗರಸಭೆ ಆಯುಕ್ತ ಜಗದೀಶ್ ಇದ್ದರು.
ವಿಕಲಚೇತನ ಜತೆ ದೀವಾಳಿ ಸಂಭ್ರಮ
ಕೋಲಾರ: ಜಾಗೃತಿ ಸೇವಾ ಸಂಸ್ಥೆ ಆಶ್ರಯದಲ್ಲಿ ನಗರದ ಗಾಂಧಿವನದಲ್ಲಿ ದೀವಾಪಳಿ ಪ್ರಯುಕ್ತ ಅಂಗವಿಕಲ ಮಕ್ಕಳೊಂದಿಗೆ ನ.4 ರ ಬೆಳಿಗ್ಗೆ 10-30ಕ್ಕೆ “«ÛÈÚâ ¬Èæà½M¦Væ’ ಎಂಬ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಕೆ.ಆರ್.ಧನರಾಜ್ ತಿಳಿಸಿದ್ದಾರೆ.ವಿಕಲಚೇತನ ಮತ್ತು ಅನಾಥ ಮಕ್ಕಳೊಂದಿಗೆ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಕಾರ್ಯಕ್ರಮ ಇದಾಗಿದ್ದು, ನಗರಸಭೆ ಆಯುಕ್ತ ಕೆ.ಎನ್.ಜಗದೀಶ್ ಉದ್ಘಾಟಿಸಲಿದ್ದಾರೆ.ಅತಿಥಿಗಳಾಗಿ ಡಿವೈಎಸ್ಪಿ ಅಶೋಕ್ಕುಮಾರ್, ವಕೀಲರ ಸಂಘದ ಅಧ್ಯಕ್ಷ ಟಿ.ಎಂ.ಶಿವಣ್ಣ, ಕೆಎಸ್ಎಫ್ಸಿ ವ್ಯವಸ್ಥಾಪಕ ಎಂ.ಮಾರ್ಕಂಡೇಯ್ಯ, ವಕೀಲ ಕೆ.ವಿ.ಸುರೇಂದ್ರಕುಮಾರ್, ಅಂತರಗಂಗಾ ವಿಕಲಚೇತನರ ಸಂಸ್ಥೆ ಕಾರ್ಯದರ್ಶಿ ಕೆ.ಎಸ್.ಶಂಕರ್, ಅಶ್ವಥನಾರಾಯಣ, ಎಸ್.ನಾಗರಾಜ್ ಮತ್ತಿತರರು ಭಾಗವಹಿಸಲಿದ್ದಾರೆ.
ಬಿಜೆಪಿಗೆ ನೇಮಕ
ಕೋಲಾರ: ರಾಜ್ಯ ಭಾರತೀಯ ಜನತಾ ಪಕ್ಷ ಅಲ್ಪಸಂಖ್ಯಾತರ ಮೋರ್ಚಾದ ರಾಜ್ಯ ಕಾರ್ಯದರ್ಶಿಯನ್ನಾಗಿ ಜಾಮೀನ್ ಉಲ್ಲಾಖಾನ್ ನೇಮಕ ಮಾಡಲಾಗಿದೆ.ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಶಿಫಾರಸಿನ ಮೇರೆಗೆ, ಲ್ಪಸಂಖ್ಯಾತರ ಮೋರ್ಚಾ ಾಜ್ಯ ಅಧ್ಯಕ್ಷ ಡಾ.ಎಂ.ಎಫ್.ಮೋಸಿನ್ ಉಲ್ಲಾಖಾನ್ಅವರನ್ನು ನೇಮಕ ಮಾಡಿದ್ದಾರೆ.
ಮಾಲೂರಲ್ಲಿ ಹೂವಿನ ಅಂಗಡಿಗಳ ಒತ್ತುವರಿ ತೆರವು
ಮಾಲೂರು: ರಸ್ತೆಯನ್ನು ಅತಿಕ್ರಮಿಸಿ ಹೂವಿನ ಅಂಗಡಿ ವ್ಯಾಪಾರದಿಂದ ರಸ್ತೆ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಬಗ್ಗೆ ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಪೊಲೀಸ್ ಸಬ್ಇನ್ಸ್ಪೆಕ್ಟರ್ ಮಂಜುನಾಥ್ ಕಾರ್ಯಾಚರಣೆ ನಡೆಸಿ ಹೂವಿನ ಅಂಗಡಿಗಳ ಒತ್ತುವರಿಯನ್ನು ತೆರವುಗೊಳಿಸಿದ ಘಟನೆ ಭಾನುವಾರ ನಡೆದಿದೆ.
ಹಬ್ಬ ಹರಿದಿನಗಳಲ್ಲದೇ ವಾರದ ಇತರೆ ದಿನಗಳಲ್ಲೂ ಬಸ್ನಿಲ್ದಾಣಕ್ಕೆ ಹೊಂದಿ ಕೊಡಂತೆ ಇರುವ ಹೂವಿನ ಅಂಗಡಿಗಳ ಒತ್ತುವರಿಯಿಂದ ವಾಹನ ಸೇರಿದಂತೆ ಪಾದಾಚಾರಿಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯವರು ನೀಡಿದ ಸೂಚನೆಯನ್ನು ಹೂವಿನ ಅಂಗಡಿಯವರು ನಿರ್ಲಕ್ಷ್ಯ ತೋರಿ ರಸ್ತೆ ಒತ್ತುವರಿಯನ್ನು ಮುಂದುವರೆಸಿದ್ದ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ದಿಢೀರ್ ಕಾರ್ಯಾಚರಣೆ ನಡೆಸಿದ ಎಸ್ಐ ಮಂಜುನಾಥ್ ಹಾಗೂ ಪೊಲೀಸ್ ತಂಡದವರು ಬಸ್ನಿಲ್ಧಾಣದ ಹೊಂದಿಕೊಂಡಂತೆ ಇದ್ದ ಹೂವಿನ ಅಂಗಡಿಗಳನ್ನು ತರೆವುಗೊಳಿಸಿದರು. ಪೊಲೀಸ್ರ ಈ ಕಾರ್ಯಾಚರಣೆಯನ್ನು ಸ್ವಾಗತಿಸಿರುವ ಸಾರ್ವಜನಿಕರು ಹೂವಿನ ಮಂಡಿಯವರಿಗೆ ಬೇರೆಡೆ ಜಾಗ ಕಲ್ಪಿಸಿ ಬಸ್ ನಿಲ್ದಾಣ ಬಳಿಯ ಸಂಚಾರವನ್ನು ಸುಗುಮಗೊಳಿಸಬೇಕಾಗಿ ಈ ಸಂದರ್ಭದಲ್ಲಿ ವ್ಯಾಪಾರಿಗಳು ಪೊಲೀಸರಲ್ಲಿ ವಿನಂತಿಸಿದ್ದಾರೆ.