ಅಕ್ರಮ ಕಾಮಗಾರಿ ವಿರುದ್ಧ ನಾಗರಿಕರ ಪ್ರತಿಭಟನೆ
ಶಿಡ್ಲಘಟ್ಟ: ಉದ್ದೇಶಿತ ಜಾಗ ಬಿಟ್ಟು ಕೆಳಸೇತುವೆಶಿಲಾನ್ಯಾಸ ನೆರವೇರಿಸಲು ಮುಂದಾಗಿದ್ದ ರೇಲ್ವೆ ಕಾರ್ಯಪಾಲಕ ಅಭಿಯಂತರ ವಿರುದ್ಧ ನಾಗರಿಕರು ಧಿಕ್ಕಾರ ಘೋಷಣೆ ಕೂಗಿ ವಾಪಸ್ ಳುಹಿಸಿದ ಪ್ರಸಂಗ ಪಟ್ಟಣದ ಗಾಂಧಿನಗರದಲ್ಲಿ ಸಂಭವಿಸಿತು.ಪಟ್ಟಣದ 3ನೇ ಕಾರ್ಮಿಕ ನಗರದ ಸಹಸ್ರಾರು ನಾಗರಿಕರಿಗೆ ಸಂಚರಿಸಲು ಅನುಕೂಲ ಕಲ್ಪಿಸಲು ಪ್ರತ್ಯೇಕವಾಗಿ ಕೆಳಸೇತುವೆಯನ್ನು ನಿರ್ಮಿಸಬೇಕು ಎಂದು ಆಗ್ರಹಿಸಿ ನೂರಾರು ನಾಗರಿಕರು ಈ ಹಿಂದೆ ಪ್ರತಿಭಟನೆ ಧರಣಿ ನಡೆಸುವ ಮೂಲಕ ಆಗಿನ ರೇಲ್ವೆ ಖಾತೆ ರಾಜ್ಯ ಸಚಿವ ಕೆ.ಹೆಚ್.ಮುನಿಯಪ್ಪ ನಾಗರಿಕರ ಬೇಡಿಕೆಗಳನ್ನು ಈಡೇರಿಸುವುದಾಗಿ ಈ ಇಬ್ಬರು ನಾಯಕರು ಭರವಸೆ ನೀಡಿದ್ದರು. ನಾಗರಿಕರ ಪ್ರತಿರೋಧ ಎದುರಿಸಿ ಸುಸ್ತಾದ ರೇಲ್ವೆ ಇಲಾಖೆ ಎಂಜಿನಿಯರ್ ಅಮರ್ಗುಂಡಪ್ಪ ಬಂದ ದಾರಿಗೆ ಸುಂಕವಿಲ್ಲದೇ ವಾಪಸ್ ತೆರಳಿದರು.