ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಧಿಕಾರಿಗಳ ನಿರ್ಲಕ್ಷ್ಯ: ಕಳೆಗಟ್ಟದ ರಾಜ್ಯೋತ್ಸವ

Rashmi Kasaragodu
Updated On : 5 Nov 2013, 12:44 pm

ಕೆಜಿಎಫ್: ಕೆಜಿಎಫ್‌ನಲ್ಲಿ ಕಳೆದ ಹತ್ತಾರು ವರ್ಷಗಳ ಹಿಂದೆ ತಮಿಳುಮಯ ವಾತಾವರಣವಿದ್ದ ಸಂದರ್ಭದಲ್ಲಿ ನಾಡಹಬ್ಬ ಕರ್ನಾಟಕ ರಾಜ್ಯೋತ್ಸವ ಆಚರಣೆಯನ್ನು ಕನ್ನಡಾಭಿಮಾನಿಗಳು, ಕನ್ನಡಪರ ಸಂಘ ಸಂಸ್ಥೆಗಳು ಸೇರಿದಂತೆ ಕೆಜಿಎಫ್ ಎಲ್ಲಾ ಭಾಷಿಕರು ಒಗ್ಗೂಡಿ ರಾಜ್ಯೋತ್ಸವ ಆಚರಿಸಲಾಗುತ್ತಿತ್ತು. ಕನ್ನಡ ರಾಜ್ಯೋತ್ಸವ ಆಚರಣೆಗೆ ಒಂದು ತಿಂಗಳ ಮುಂಚೆಯೇ ಅಧಿಕಾರಿಗಳ ಹಾಗೂ ಕನ್ನಡ ಸಂಘದ ವತಿಯಿಂದ ಪೂರ್ವಭಾವಿ ಸಭೆ ಕರೆದು ಎಲ್ಲಾ ರೀತಿಯ ಸಿದ್ಧತೆ ಎದ್ದು ಕಾಣುತ್ತಿತ್ತು.
ರಾಜ್ಯೋತ್ಸವ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುತ್ತಿದ್ದರು. ಮಾತ್ರವಲ್ಲ, ಮಹಿಳೆಯರು, ಮಕ್ಕಳು, ಯುವಕರು, ವೃದ್ಧರು, ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವಿವಿಧ ರೀತಿಯ ಉತ್ಸವ, ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದರು. ಆದರೆ ಇತ್ತೀಚಿನ ಕಳೆದ ಒಂದೆರಡು ವರ್ಷಗಳಿಂದ ಕೆಜಿಎಫ್‌ನಲ್ಲಿ  ಕನ್ನಡಪರ ಸಂಘಟನೆಗಳು, ಕನ್ನಡಾಭಿಮಾನಿಗಳು ಮತ್ತು ಸರ್ಕಾರಿ ಇಲಾಖೆಗಳು ಮತ್ತು ಕ್ಷೇತ್ರದ ಜನಪ್ರತಿನಿಧಿಗಳು ಕನ್ನಡ ರಾಜ್ಯೋತ್ಸವ ಆಚರಣೆಯನ್ನು ನಾಮಕವಾಸ್ತೆ ಎಂಬಂತೆ ಆಚರಿಸುತ್ತಿರುವುದುಸಾರ್ವಜನಿಕರಲ್ಲಿ ಚರ್ಚೆಗೆ ಎಡೆಮಾಡಿಕೊಟ್ಟಿದೆ.ಇತ್ತೀಚೆಗೆ ಕನ್ನಡ ಸಂಘದಲ್ಲಿ ಹಾಗೂ ಇತರೆ ಕನ್ನಡಪರ ಸಂಘಟನೆಗಳಲ್ಲಿ ಗುಂಪುಗಾರಿಕೆಯಿಂದಾಗಿ ಕನ್ನಡ ಅಭಿವೃದ್ದಿಗೆ ಮತ್ತು ಕನ್ನಡದ ವಾತಾವರಣ ಮೂಡಿಸುವಲ್ಲಿ  ನಿರ್ಲಕ್ಷ್ಯತೆಯಿಂದಾಗಿ ಈ ವರ್ಷ ಕೆಜಿಎಫ್ ಕ್ಷೇತ್ರದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಸಂಪೂರ್ಣ ವಿಫಲವಾಗಿದೆ ಎಂಬುದು ಸಾರ್ವಜನಿಕರಲ್ಲಿ ಎಲ್ಲೆಡೆ ಕೇಳಿ ಬರುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ಕನ್ನಡಸಂಘದ ವತಿಯಿಂದ ಕಳೆದ ನ.1ರಂದು ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡಪರ ಸಂಘ ಸಂಸ್ಥೆಗಳ ಮುಖಂಡರು, ಕನ್ನಡಾಭಿಮಾನಿಗಳು, ಕೆಲ  ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಭಾಗವಹಿಸದ ಕಾರಣ, ರಾಜ್ಯೋತ್ಸವ ಆಚರಣೆಗೆ ಬೆಂಬಲ ವ್ಯಕ್ತವಾಗಿಲ್ಲ. ಸ್ಥಳೀಯ ಶಾಸಕಿ ವೈ.ರಾಮಕ್ಕ  ಗೈರುಹಾಜರಿಯೂ ಎದ್ದು ಕಾಣುತ್ತಿತ್ತು.  ಈ ನಿಟ್ಟಿನಲ್ಲಿ  ಕನ್ನಡಪರ ಹೋರಾಟಗಾರರಿಗೆ, ನಿರಾಸೆವುಂಟಾಗಿದ್ದು ನಗರದ ಎಲ್ಲೆಡೆ ಕನ್ನಡ ಸಂಘಗಳ ಹಾಗೂ ಜನಪ್ರತಿನಿಧಿಗಳ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement