ಗೌರಿಬಿದನೂರು: ರಸ್ತೆ ಬದಿ ಅಂಗಡಿಗಳ ತೆರವು
ಗೌರಿಬಿದನೂರು: ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಪುರಠಾಣೆ ಉಪನಿರೀಕ್ಷಕ ಬೈರ ಅವರು ಸೋಮವಾರ ದಿಢೀರನೆ ರಸ್ತೆಬದಿಯಲ್ಲಿ ಅನಧಿಕೃತವಾಗಿ ಇಟ್ಟುಕೊಂಡಿದ್ದ ಹಣ್ಣು, ಹೂ, ತರಕಾರಿ ಅಂಗಡಿಗಳನ್ನು ತೆರವುಗೂಳಿಸಿದರು. ಹಬ್ಬದ ವ್ಯಾಪಾರದಲ್ಲಿದ್ದ ವ್ಯಾಪಾರಸ್ತರಿಗೆ ಸಂಚಾರಕ್ಕೆ ಅಡ್ಡಿ ಮಾಡಬಾರದೆಂದು ಎಚ್ಚರಿಕೆ ನೀಡಿದರು. ಪುರಸಭೆ ಕಾರ್ಯಾಲಯ ಮತ್ತು ಮಾರುಕಟ್ಟೆ ಮುಂಭಾಗದಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಮತ್ತು ತಳ್ಳುವ ಗಾಡಿಗಳ ವ್ಯಾಪಾರಸ್ತರಿಗೆ ಎಚ್ಚರಿಕೆ ನೀಡಿ ಇನ್ನು ಮುಂದೆ ವಿನಾಕಾರಣ ರಸ್ತೆ ಬದಿಯಲ್ಲಿ ಅಂಗಡಿಗಳನ್ನು ಇಟ್ಟು ರಸ್ತೆ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವುದೆಂದು ಎಚ್ಚರಿಕೆ ನೀಡಿದರು.