ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಡಾ.ಸರೋಜಿನಿ ವರದಿ ಜಾರಿಗೆ ಆಗ್ರಹಿಸಿ 7 ರಿಂದ ರಾಜ್ಯ ವ್ಯಾಪಿ ಹೋರಾಟ: ಕರವೇ

Rashmi Kasaragodu
Updated On : 5 Nov 2013, 12:45 pm

ಮಾಲೂರು: ಡಾ.ಸರೋಜಿನಿ ಮಹಿಷಿ ವರದಿಯನ್ನು ತ್ವರಿತವಾಗಿ  ಜಾರಿಗೊಳಿಸಲು ಒತ್ತಾಯಿಸಿ ನ.7 ರಿಂದ ರಾಜ್ಯ ವ್ಯಾಪಿ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಸಜ್ಜಾಗಿದೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ತಿಳಿಸಿದ್ದಾರೆ. ಇಲ್ಲಿನ ಮಾಸ್ತಿ ವೆಂಕಟೇಶ್ವರ ಅಯ್ಯಂಗಾರ್ ರಂಗಮಂದಿರದಲ್ಲಿ ಸ್ಥಳೀಯ ಕನ್ನಡಪರ ಸಂಘಟನೆಗಳ ಒಕ್ಕೂಟ ಆಯೋಜಿಸಿದ್ದ 3 ದಿನ ಗಳ ಕನ್ನಡ ರಾಜ್ಯೋತ್ಸವ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿದರು. ಡಾ.ಸರೋಜಿನಿ ಮಹಿಷಿ ವರದಿ ಜಾರಿಯಿಂದ ಕಂಪನಿ-ಕಾರ್ಖಾನೆಗಳಲ್ಲಿ ಶೇ.85 ಹುದ್ದೆಗಳು ಕನ್ನಡಿಗರ ಪಾಲಾಗಲಿದೆ. ಆದರೆ, ವರದಿ ಜಾರಿಗೊಳಿಸಲು ಮಿನ-ಮೇಷ ಎಣಿಸುತ್ತಿರುವುದು ಸರಿಯಲ್ಲ ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.
 ಸಿಎಂ ಹೊಸ ರಾಗ: ವರದಿ ಜಾರಿ ತರಲು ಒಂದು ವಾರ ಕಾಲಾವಕಾಶ ಕೋರಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಇನ್ನೂಂದು ಸಮಿತಿ ರಚಿಸುವುದಾಗಿ ಹೂಸ ರಾಗ ತೆಗೆಯುತ್ತಿದ್ದಾರೆ. ಇವರ ಧೋರಣೆ ಖಂಡಿಸಿ, ವರದಿ ಜಾರಿ ಶೀಘ್ರವಾಗಿ ಆಗಲೇಬೇಕು ಎಂದು ಒತ್ತಾಯಿಸಿ ಕರವೇ ಕಾರ್ಯಕರ್ತರು ರಾಜ್ಯ ವ್ಯಾಪಿ ಹೋರಾಟ ಮಾಡಲಿದ್ದಾರೆ ಎಂದರು.
ಶಾಶ್ವತ ನೀರಾವರಿ ಹೋರಾಟಕ್ಕೂ ಸಿದ್ಧ: ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆಗಾಗಿ ಹೋರಾಟ ಮಾಡಲು ಸಂಘಟನೆ ಸಿದ್ಧವಾಗಿದ್ದು, ಜಿಲ್ಲೆಯಲ್ಲಿರುವ ವಿವಿಧ ಪಕ್ಷಗಳ ಜನಪ್ರತಿನಿಧಿಗಳ ಸಂಪೂರ್ಣ ಸಹಕಾರ ನೀಡಬೇಕಾಗಿದೆ ಎಂದು ಟಿ.ಎ.ನಾರಾಯಣಗೌಡ ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement