ಬುದ್ಧಿವಾದ ಹೇಳಿದ ತಂದೆಯನ್ನೇ ಕೊಲೆ ಮಾಡಿದ ದುಶ್ಚಟಗಳ ಸುಪುತ್ರ!
ಚಿಂತಾಮಣಿ: ದುಶ್ಚಟಗಳಿಗೆ ಒಳಗಾಗಿದ ಮಗನಿಗೆ ಬುದ್ಧಿವಾದ ಹೇಳಿದ ತಂದೆಯನ್ನೇ ಕೊಲೆ ಮಾಡಿದ ದುರ್ಘಟನೆ ಪಟ್ಟಣದ ಸೊಣ್ಣಶೆಟ್ಟಿಹಳ್ಳಿಯಲ್ಲಿ ಬಲಿಪಾಡ್ಯಮಿ ಅಮಾವಾಸ್ಯೆ ಭಾನುವಾರ ರಾತ್ರಿಯಲ್ಲಿ ನಡೆದಿದೆ.
ಘಟನೆ ವಿವರ: ಪಟ್ಟಣದ ಸೊಣ್ಣಶೆಟ್ಟಿಹಳ್ಳಿ ನಿವಾಸಿ ಶ್ರೀನಿವಾಸನಾಯ್ಡು(50) ಕೊಲೆಯಾದ ದುರ್ದೈವಿ.
ತಂದೆ ಶ್ರೀನಿವಾಸನಾಯ್ಡು ತಾಯಿ ಪದ್ಮಾವತಮ್ಮ ದಂಪತಿ ಸುಪುತ್ರನಾದ ಶಿವಕುಮಾರ್ (24)ಯುವಕನಾಗಿ ಓದಿನಲ್ಲಿ ಹಿಂದಾಗಿ ಪಡ್ಡೆ ಹುಡುಗರ ಸಹವಾಸದಿಂದ ದುಶ್ಚಟಗಳಿಗೆ ಒಳಗಾಗಿ ದಿನನಿತ್ಯ ಒಂದಲ್ಲಾ ಒಂದು ಕಾರಣದಿಂದ ಮನೆಯಲ್ಲಿ ಹಣಕ್ಕಾಗಿ ಪೀಡಿಸುತ್ತಿದ್ದ ಶಿವಕುಮಾರ್ ಬಲಿಪಾಡ್ಯಮಿ ಅಮಾವಾಸ್ಯೆ ಭಾನುವಾರ ದೀಪಾವಳಿ ಹಬ್ಬದ ದಿನದಂದು ತಂದೆಯನ್ನೇ ಕತ್ತರಿಯಿಂದ ಹೃದಯ ಭಾಗಕ್ಕೆ ತಿವಿದು ಕೊಲೆ ಮಾಡಿರುವುದಾಗಿ ಶರಣಾದ ಶಿವಕುಮಾರ ಪೊಲೀಸ್ ವಿಚಾರಣಾ ವೇಳೆಯಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಮುಗಿಲು ಮುಟ್ಟಿದ ಆಕ್ರಂದನ: ಜನರೆಲ್ಲಾ ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿಯನ್ನು ಸಿಡಿಸಿ ಹಬ್ಬ ಆಚರಿಸುತ್ತಿದ್ದರೆ, ಜನ್ಮ ನೀಡಿದ ತಂದೆಯನ್ನೇ ಕುಡಿದ ಅಮಲಲ್ಲಿ ಹಣ ನೀಡಲಿಲ್ಲವೆಂದು ಕುಪಿತಗೊಂಡ ಮಗ ಶಿವಕುಮಾರ ತಾಯಿ ಪದ್ಮಾವತಮ್ಮನ ಎದುರಲ್ಲೇ ಶ್ರೀನಿವಾಸನಾಯ್ಡುನನ್ನು ಕೊಲೆ ಮಾಡಿರುವ ಮಗನ ವಿರುದ್ಧ ಆಕ್ರೋಶ ಮುಗಿಲು ಮುಟ್ಟಿತು. ಸುದ್ದಿ ತಿಳಿದ ತಕ್ಷಣ ಡಿವೈಎಸ್ಪಿ ಸಣ್ಣತಿಮ್ಮಪ್ಪ, ವೃತ್ತನಿರೀಕ್ಷಕ ನಂಜಪ್ಪ, ಕೊಲೆ ನಡೆದ ಸ್ಥಳವನ್ನು ಪರಿಶೀಲಿಸಿ ನಂತರ ಆರೋಪಿ ಶಿವಕುಮಾರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಮೃತಪಟ್ಟ ಶವವನ್ನು ಪಟ್ಟಣದ ಸಾರ್ವಜನಿಕರ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿದ ನಂತರ ಶವವನ್ನು ಸಂಬಂಧಿಕರಿಗೆ ನೀಡಲಾಯಿತು. ಯಾವುದೇ ಅಹಿತಕರವಾದ ಘಟನೆ ನಡೆಯದಂತೆ ಪೊಲೀಸರು ಸೂಕ್ತ ಬಂದೂಬಸ್ತು ಕಲ್ಪಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೇಸು ದಾಖಲಿಸಿಕೊಂಡು ಮುಂದಿನಕ್ರಮ ಕೈಗೊಂಡಿದ್ದಾರೆ.