ಶಾಶ್ವತ ನೀರಾವರಿ ಯೋಜನೆಗೆ ಮಂಜುನಾಥ್‌ಗೌಡ ಒತ್ತಾಯ
ಮಾಲೂರು: ರಾಜ್ಯ ಸರ್ಕಾರವು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನ ನಗೊಳಸದಿದ್ದರೆ ಉಭಯ ಜಿಲ್ಲೆಗಳಲ್ಲಿ ಒಂದು ವಾರ ಬಂದ್ ಆಚರಿಸಲು ಹಿಂಜರಿಯುವುದಿಲ್ಲ ಎಂದು ಶಾಸಕ ಮಂಜುನಾಥ್‌ಗೌಡ ಗುಡುಗಿದರು. ಇಲ್ಲಿನ ಕನ್ನಡಪರ ಸಂಘಟನೆಗಳ ಒಕ್ಕೂಟ ಪಟ್ಟಣದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಬಗ್ಗೆ ತಾಲೂಕು ಜನತೆ ಸಹಕರಿಸಿದರೆ ಒಂದೇ ಒಂದು ವಾಹನ ರಸ್ತೆಗೆ ಇಳಯದಂತೆ ಒಂದು ವಾರದ ಉಗ್ರ ಹೋರಾಟ ಹಮ್ಮಿಕೊಳ್ಳೋಣ. ಜಿಲ್ಲಾದ್ಯಂತ ಬಂದ್ ನಡೆಸಲು ಉಳಿದ ತಾಲೂಕಿನ ಶಾಸಕರ ಮನವೊಲಿಸಲು ಕೆಲಸ ಮಾಡುತ್ತೇನೆ ಎಂದರು. ತಹಸೀಲ್ದಾರ್ ಡಾ.ಬಿ.ಸುಧಾ ಮಾತನಾಡಿ, ಭಾಷೆ ಸಂಸ್ಕೃತಿಯ ಭಾಗವಾಗಿರುವುದರಿಂದ ನಮ್ಮ ಸಂಸ್ಕೃತಿಯನ್ನು ನಾವೂ ಆಳವಡಿಸಿಕೊಂಡರೆ ಸಾಕು ಭಾಷೆ ತನ್ನಿಂದ ತಾನೇ ಬೆಳೆಯಲಿದೆ ಎಂದರು. ಪುರಸಭೆ ಮಾಜಿ ಸದಸ್ಯ ಪ್ರದೀಪ್‌ರೆಡ್ಡಿ, ಟಿ.ರಾಮಚಂದ್ರ ಮತ್ತಿತರರು ಮಾತನಾಡಿದರು. ಇದೇ ವೇಳೆ ಸಾಹಿತಿ ಪ್ರೊ. ಚಂದ್ರಶೇಖರ್ ನಂಗಲಿ, ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ರಾಜಪ್ಪ ಮತ್ತಿತರರನ್ನು ಸನ್ಮಾನಿಸಲಾಯಿತು. ಜೆಡಿಎಸ್ ಮುಖಂಡ ನಂಜೇಗೌಡ, ಕೃಷಿಕ ಸಮಾಜ ಅಧ್ಯಕ್ಷ ಹನುಮಂತಪ್ಪ, ಕರವೇ ತಾಲೂಕು ಅಧ್ಯಕ್ಷ ಮಂಜುನಾಥ್‌ಗೌಡ, ಮುರಳೀಧರ್, ವಿಜಯಲಕ್ಷ್ಮಿ,ಗೀತಾ ರಮೇಶ್ ಇದ್ದರು.