ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಹಬ್ಬ ಆಚರಣೆಗೆ ಕಾಲುಬಾಯಿ ಜ್ವರ ಅಡ್ಡಿ

Rashmi Kasaragodu
Updated On : 5 Nov 2013, 12:45 pm

ಬಂಗಾರಪೇಟೆ: ಕಾಲುಬಾಯಿ ಜ್ವರದ ಪರಿಣಾಮ, ತಾಲೂಕಿನ ಹಲವು ಗ್ರಾಮಗಳಲ್ಲಿ ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಅಡ್ಡಿಯಾಗಿದೆ. ಕಳೆದ ಎರಡು ತಿಂಗಳಿಂದ ಕ್ಷೇತ್ರದಾದ್ಯಂತ ರಾಸುಗಳು ಹಾಗೂ ಕೋಳಿ ಕುರಿ, ಮೇಕೆಗಳಿಗೆ ಕಾಲುಬಾಯಿ ಜ್ವರ ವ್ಯಾಪಕವಾಗಿ ಹರಡಿದ ಪರಿಣಾಮ, ಈಗಾಗಲೇ ಈ ಮಾರಕ ಜ್ವರಕ್ಕೆ ನೂರಾರು ಹಸುಗಳು ಮೃತಪಟ್ಟಿವೆ. ದೋಣಿ ಮಡಗು ಪಂಚಾಯ್ತಿಯ ಎಲ್ಲಾ 15ಕ್ಕೂ ಹೆಚ್ಚಿನ ಗ್ರಾಮಗಳಲ್ಲಿ ದೀಪಾವಳಿ ಹಬ್ಬ ಆಚರಣೆ ಮಾಡದಿರಲು ನಿರ್ಧರಿಸಿದ್ದಾರೆ. ಇದರಿಂದ ಎಲ್ಲೆಡೆ ಸಡಗರದಿಂದ ಜನರು ಹಬ್ಬದಲ್ಲಿ ನಿರತರಾಗಿದ್ದರೆ ಈ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿ ಹಬ್ಬದ ವಾತಾವರಣವಿಲ್ಲ.ಈ ನಡುವೆ ಈ ಭಾಗದ ರೈತರ ಕೋರಿಕೆ ಮೇರೆಗೆ ಶಾಸಕ ನಾರಾಯಣಸ್ವಾಮಿ ತೊಪ್ಪನಹಳ್ಳಿಯಲ್ಲಿ ಪಶು ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿರುವುದು ರೈತರಲ್ಲಿ ಸಂಸತ ಮೂಡಿಸಿದೆ.
ಎಟಿಎಂ ನಿಷ್ಕ್ರಿಯ;
ಗ್ರಾಹಕರ ಪರದಾಟ
ಬಂಗಾರಪೇಟೆ: ಪಟ್ಟಣದ ಎಲ್ಲಾ ಎಟಿಎಂ ಕೇಂದ್ರಗಳಲ್ಲಿ ಕಳೆದ ಮೂರು ದಿನಗಳಿಂದ ಹಣ ಇರದ ಕಾರಣ ಹಣ ಪಡೆಯಲೆಂದು ಎಟಿಎಂ ಕೇಂದ್ರಗಳಿಗೆ ಧಾವಿಸಿದ ಗ್ರಾಹಕರು ಪರದಾಡುವಂತಾಗಿದೆ. ಕಳೆದ ನಾಲ್ಕು ದಿನಗಳಿಂದ ಸಾಲು-ಸಾಲು ಸರ್ಕಾರಿ ರಜೆ ಇತ್ತಾದ್ದರಿಂದ ಪಟ್ಟಣದಲ್ಲಿರುವ ಎಲ್ಲಾ 7 ಎಟಿಎಂ ಕೇಂದ್ರಗಳಲ್ಲಿ ಶುಕ್ರವಾರವೇ ಹಣ ಖಾಲಿಯಾಗಿದ್ದು, ಮೂರು ದಿನಗಳಿಂದ ಹಣಕ್ಕಾಗಿ ಗ್ರಾಹಕರು ಪರದಾಡುವಂತಾಗಿದೆ. ದೀಪಾವಳಿ ಹಬ್ಬಕ್ಕೆ ಮತ್ತಿತರೆ ಕಾರ್ಯಗಳಿಗೆ ತುರ್ತಾಗಿ ಎಟಿಎಂ ಕೇಂದ್ರಗಳಲ್ಲಿ ಹಣ ಪಡೆಯಲೆಂದು ಗ್ರಾಹಕರು ತೆರಳಿದರೆ ಅಲ್ಲಿ ಹಣವಿಲ್ಲದಿರುವುದರಿಂದ ಪೀಕಲಾಟಕ್ಕೆ ಸಿಲುಕಿದ್ದಾರೆ. ಎಸ್‌ಬಿಐ,  ಲಕ್ಷ್ಮೀವಿಲಾಸ್, ಎಸ್‌ಬಿಎಂ, ಐಸಿಐಸಿಐ, ಕೆನರಾ ಬ್ಯಾಂಕ್ ಎಟಿಎಂ ಕೇಂದ್ರಗಳಲ್ಲಿ  ಹಣ ದೊರೆಯದ ಕಾರಣ ಗ್ರಾಹಕರು ಬ್ಯಾಂಕ್‌ಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಬೀದಿ ದೀಪ ರಿಪೇರಿಗೆ ಆಗ್ರಹ
ಶ್ರೀನಿವಾಸಪುರ: ಶ್ರೀನಿವಾಸಪುರ ಪುರಸಭೆ ವ್ಯಾಪ್ತಿಯಲ್ಲಿನ ಜಾಕಿರ್ ಹುಸೇನ್ ಮೊಹಲ್ಲಾ, ಆರ್.ಕೆ.ಪಿ.ರಸ್ತೆಯಲ್ಲಿ ಬೀದಿ ದೀಪಗಳು ಕೆಟ್ಟು  ತಿಂಗಳುಗಳೇ ಕಳೆದಿವೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಬೀದಿ ದೀಪ ಅಳವಡಿಸುವಲ್ಲಿ ಬೇಜಾಬ್ದಾರಿತ ತೋರುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ. ರಾತ್ರಿ ವೇಳೆಯಲ್ಲಿ ಭಯದಲ್ಲಿ ಓಡಾಡಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪುರಸಭೆಗೂ ದೂರು ನೀಡಿದ್ದು, ಈ ನಿಟ್ಟಿನಲ್ಲಿ ಅವರು ಕೂಡ ಕಾರ್ಯೋನ್ಮುಖರಾಗದೇ ಇದ್ದಿದ್ದಕ್ಕೆ ಮತ್ತೆ ಪುರಸಭೆಯ ಮುಖ್ಯಾಧಿಕಾರಿಗೆ ಮೌಖಿಕ ದೂರು ನೀಡಲಾಗಿದೆ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement