ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಚರಂಡಿ ಕಾಮಗಾರಿ ಶೀಘ್ರ ಪೂರ್ಣ: ಶಾಸಕ ಮಂಜುನಾಥ್ಗೌಡ

Rashmi Kasaragodu
Updated On : 6 Nov 2013, 12:19 pm

ಮಾಲೂರು: ಪಟ್ಟಣದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಾರಂಭವಾಗುವ ಒಳಗೆ ಬಾಕಿ ಇರುವ ಒಳ ಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ ಎಂದು ಶಾಸಕ ಮಂಜುನಾಥ್ಗೌಡ ಅವರು ತಿಳಿಸಿದ್ದಾರೆ.
ಇಲ್ಲಿನ ಪುರಸಭೆಯಲ್ಲಿ ಆಯೋಜಿಸಿದ್ದ ಪುರಸಭೆ ಸದಸ್ಯರು-ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,  ಪಟ್ಟಣದಲ್ಲಿ ಒಳ ಚರಂಡಿ ಕಾಮಗಾರಿ ಬಹುತೇಕ ಪೂರ್ಣವಾಗಿದ್ದರೂ, ಮನೆಗಳಿಗೆ ಸಂಪರ್ಕಿಸುವ ಪೈಪ್ ಆಳವಡಿಕೆ ಬಾಕಿ ಉಳಿದಿತ್ತು. ಸಾರ್ವಜನಿಕರೇ ಆಳವಡಿಸಿಕೊಳ್ಳಬೇಕಾದ ಈ ಕಾಮಗಾರಿಯನ್ನು ಪುರಸಭೆಯ ಸಹಕಾರದಲ್ಲಿ ಪೂರ್ಣಗೊಳಿಸಲು ತೀರ್ಮಾನಿಸಲಾಗಿದ್ದು, ರಸ್ತೆಯ ಅಗಲದ ಮೇಲೆ ಸಂಬಂಧ ಪಟ್ಟ ಮನೆ ಮಾಲೀಕರಿಂದ ಹಣ ಪಡೆದು ಫೈಪು ಆಳವಡಿಕೆಯ ಕಾಮಗಾರಿ ಪೂರ್ಣಗೊಳಿಸಿ ನಂತರ ರಸ್ತೆಗೆ ಡಾಂಬರೀಕರಣ ಮಾಡಲು ತೀರ್ಮಾನಿಸಲಾಗಿದೆ ಎಂದು ಶಾಸಕರು ತಿಳಿಸಿದರು.
ಮಾಲೂರು ಪುರಸಭೆ ಮುಖ್ಯಾಧಿಕಾರಿ ರೇಣುಕಾ ಮಾತನಾಡಿ, ಹತ್ತು ಅಡಿ ರಸ್ತೆಯಲ್ಲಿರುವ ಮನೆಗಳಿಗೆ ಒಳ ಚರಂಡಿ ಸಂರ್ಪಕಿಸುವ ಪೈಪ್ ಆಳವಡಿಸಲು ರು.1500, 15 ಅಡಿ ರಸ್ತೆಯಲ್ಲಿರುವ ಮನೆಗಳ ಮಾಲೀಕರು ತಲಾ ರು. 2000 ಹಾಗೂ 15 ಅಡಿ ಕ್ಕಿಂತ ಹೆಚ್ಚು ಅಗಲವಿರುವ ರಸ್ತೆಯ ಮಾಲೀಕರು ಪೈಪ್ ಆಳವಡಿಸಲು ತಲಾ ರು.3000 ನೀಡಬೇಕಾಗಿದೆ ಎಂದರು. ಒಂದು ಸಂಪರ್ಕಕ್ಕೆ ರು.3500 ಗಳಿಗಿಂತಲೂ ಹೆಚ್ಚಾಗಿದ್ದರೂ ಶಾಸಕರು ಗುತ್ತಿಗೆದಾರರ ಮನವೂಳಿಸಿದ  ಪರಿಣಾಮ ಜನತೆ ಮೇಲಿನ ಹೊರೆ ಕಡಿಮೆಯಾಗಲಿದೆ ಎಂದರು.
ಪುರಸಭೆ ಸದಸ್ಯರಾದ ಸಿ.ಪಿ.ನಾಗರಾಜ್, ವೇಮನ,ರಾಮಮೂರ್ತಿ, ಲಕ್ಷ್ಮಿನಾರಾಯಣ್, ಸೋಮಣ್ಣ, ಲಿಂಗೇಶ್, ಸಿ.ಪಿ. ವೆಂಕಟೇಶ್,ಅಲೂಮಂಜು, ಭಾರತಮ್ಮ ನಂಜುಂಡಪ್ಪ, ಜಾಕಿರ್ಖಾನ್, ಸಾಬೂಸಾಬ್, ಅಭಿಯಂತರ ಮಂಜುನಾಥ್, ಗುತ್ತಿಗೆದಾರ  ಪ್ರಕಾಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement