ಪರಮಶಿವಯ್ಯ ವರದಿ ಜಾರಿಗೆ ಮನವಿ
ಚಿಂತಾಮಣಿ: ಡಾ.ಪರಮಶಿವಯ್ಯ ವರದಿ ಜಾರಿಗೆ ಒತ್ತಾಯಿಸಿ ತಾಲೂಕು ಶಾಶ್ವತ ನೀರಾವರಿ ಹೋರಾಟ ಸಮಿತಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ಗೆ ಮನವಿ ಸಲ್ಲಿಸಿತು.
ಚಿಂತಾಮಣಿ ಪಟ್ಟಣ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಸಮಾರಂಭದಲ್ಲಿ ಸಚಿವ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ಗುಂಡೂರಾವ್ ಕೇಂದ್ರ ಸಚಿವ ಮುನಿಯಪ್ಪ, ಶಾಸಕರಾದ ವೈ.ಎ.ನಾರಾಯಣಸ್ವಾಮಿ ಜೆ.ಕೆ.ಕೃಷ್ಣಾರೆಡ್ಡಿ ರವರಿಗೆ ಮನವಿ ಪತ್ರ ಸಲ್ಲಿಸಿ ಕೂಡಲೇ ಶಾಶ್ವತ ನೀರಾವರಿ ಯೋಜನೆ ಜಾರಿಗೆ ತರಲು ಒತ್ತಾಯಿಸಲಾಯಿತು.
ಶಾಶ್ಚತ ನೀರಾವರಿ ಹೋರಾಟ ಸಮಿತಿ ಪದಾಧಿಕಾರಿಗಳಾದ ಲಕ್ಷ್ಮಿನಾರಾಯಣರೆಡ್ಡಿ, ನಾಗದೇನಹಳ್ಳಿ ನಾರಾಯಣಸ್ವಾಮಿ, ಊಲವಾಡಿ ಮುನಿನಾರಾಯಣಪ್ಪ, ಲಕ್ಷ್ಮಣ್, ಅಬ್ಬುಗುಂಡು ವೇಣು, ರಾಮಚೆಂದ್ರಾರೆಡ್ಡಿ ಸೇರಿದಂತೆ ಮತ್ತತಿರರು ನಿಯೋಗದಲ್ಲಿದ್ದರು.