ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರಾಮಾಣಿಕ ಪ್ರಯತ್ನ'
ಚಿಂತಾಮಣಿ: ಶೈಕ್ಷಣಿಕವಾಗಿ ಹಿಂದುಳಿದ ಎಲ್ಲಾ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ವಿವಿಧ ಸವಲತ್ತುಗಳನ್ನು ಕಲ್ಪಿಸಿಕೊಡಲು ಹಳೇ ವಿದ್ಯಾರ್ಥಿಗಳ ಒಕ್ಕೂಟ ಕಾರ್ಯರೂಪಕ್ಕೆ ತರಲಾಗುವುದು ಎಂದು ಸ್ಥಾಪಿತ ಅಧ್ಯಕ್ಷ ಎಸ್.ಎನ್. ಶ್ರೀರಾಮರೆಡ್ಡಿ ಹೇಳಿದರು. ಸಂಘವು ಯಾವುದೇ ಜಾತಿ ಪಕ್ಷಕ್ಕೆ ಸೀಮಿತವಿಲ್ಲದೆ ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಲಿದೆಯೆಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಂತರ ಮಾತನಾಡಿದ ಕಾರ್ಯಾಧ್ಯಕ್ಷ ಸಿ.ಆರ್. ಅಬ್ದುಲ್ ರಷೀದ್ ಮಾತನಾಡುತ್ತಾ ಹಳೇ ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ ವಿವಿಧ ಸಮಾಜದಲ್ಲಿನ ತುಳಿತಕ್ಕೆ ಒಳಗಾದ ಬಡ ವಿದ್ಯಾರ್ಥಿ ಮಕ್ಕಳ ಅಭಿವೃದ್ಧಿ ಶೈಕ್ಷಣಿಕ ಪ್ರೋತ್ಸಾಹ ಮುಖ್ಯಧ್ಯೇಯ್ಯವನ್ನಾಗಿ ಕಾರ್ಯರೂಪಕ್ಕೆ ತರುವುದೇ ಈ ಸಂಘದ ಮೂಲ ಉದ್ದೇಶವೆಂದು ಹೇಳಿದರು.
ಹಲವಾರು ವರ್ಷಗಳಲ್ಲಿ ರಾಜ್ಯಾದ್ಯಂತ ಹಾಗೂ ರಾಷ್ಟ್ರಾದ್ಯಂತ ವಿವಿಧ ವೃತ್ತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪಟ್ಟಣದ ಮಹಾತ್ಮ ಗಾಂಧಿ ಬಾಲಕರ ಪ್ರೌಢಶಾಲೆ ಹಳೇ ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ ಇದೇ 9 ರಂದು ಬೆಳಿಗ್ಗೆ 11.00 ಗಂಟೆಗೆ ಎಂ.ಸಿ. ಆಂಜನೇಯರೆಡ್ಡಿ ಕಲ್ಯಾಣ ಮಂಟಪದಲ್ಲಿ ಸಂಘದ ಉದ್ಘಾಟನಾ ಸಮಾರಂಭವನ್ನು ಎಂ.ಎನ್. ಶ್ರೀಹರಿ ಅಮೃತಹಸ್ತದಿಂದ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಿ. ರಂಗಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಿಡಿಪಿಯು ಅಜಿತ್ ಪ್ರಸಾದ್ ಹಾಗೂ ಕೆ.ಎನ್. ರಮಣಾರೆಡ್ಡಿ ಭಾಗವಹಿಸಲಿದ್ದಾರೆ. ಸಂಜೆ 4.30 ಗಂಟೆಗೆ ಗುರುವಂದನ ಕಾರ್ಯಕ್ರಮಕ್ಕೆ ಗೌರವಾನಿತ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ವಿ. ಗೋಪಾಲಗೌಡರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ಅತಿಥಿಗಳಾಗಿ ಉಚ್ಚನ್ಯಾಯಾಲಯದ ನ್ಯಾಯಾಧೀಶರಾದ ಹೆಚ್.ಎನ್.ನಾಗಮೋಹನ್ದಾಸ್ ಹಾಗೂ ಬೆಂಗಳೂರಿನ ನಿವೃತ್ತ ಪ್ರಾಂಶುಪಾಲ ಅ.ರಾ. ಮಿತ್ರ ಸೇರಿದಂತೆ ಇನ್ನು ಹಲವರು ಭಾಗವಹಿಸಲಿದ್ದಾರೆಂದು ಸಭೆಯಲ್ಲಿ ಉಪಸ್ಥಿತರಿಂದ ಗೌರವಾಧ್ಯಕ್ಷ ಡಾ. ಮಹಬೂಬ್ಪಾಷ , ಸಹಕಾರ್ಯದರ್ಶಿ ಬಿ. ಗೋಪಾಲರೆಡ್ಡಿ, ಸಂಚಾಲಕರಾದ ಡಾ. ಆರ್. ಶ್ರೀನಿವಾಸ, ಖಜಾಂಚಿ ಕೆ.ಎಲ್. ಶಿವಪ್ರಸಾದ್ಗುಪ್ತ ಉಪಾಧ್ಯಕ್ಷ ಎಸ್. ನಾರಾಯಣಸ್ವಾಮಿ ಇದ್ದರು.