ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರೈತಸಂಘ ಅಹೋರಾತ್ರಿ ಧರಣಿ
ಕೋಲಾರ: ಕಂಪನಿ ಕೃಷಿ ವಿರೋಧಿಸಿ, ರೈತರ ಮತ್ತು ಕೃಷಿ ಕೂಲಿಕಾರರ ಕೃಷಿಯನ್ನು ಸಂರಕ್ಷಿಸಲು, ಬಗರ್ಹುಕುಂ ಸಾಗುವಳಿಯನ್ನು ಸಕ್ರಮಗೊಳಿಸಲು, ಬಡವರಿಗೆ ಉಚಿತ ಮನೆ ನಿವೇಶನಕ್ಕಾಗಿ ಮತ್ತಿತರರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ನ.7 ಮತ್ತು 8 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ.
ಕುಡಿಯಲು ಮತ್ತು ಕೃಷಿಗೆ ಶಾಶ್ವತ ನೀರಾವರಿ ಯೋಜನೆಗಳ ಜಾರಿಗಾಗಿ, ಕೈಗಾರಿಕೆ, ರಸ್ತೆ ಮತ್ತು ಇತರೇ ಅಭಿವೃದ್ಧಿ ಹೆಸರಿನಲ್ಲಿ ಭೂಸ್ವಾಧೀನ ನಡೆಯುವಾಗ ಭೂಮಿ ಕಳೆದುಕೊಳ್ಳುವ ರೈತರಿಗೆ ಉತ್ತಮ ಬೆಲೆ ನೀಡಲು ಭೂಮಿ ಕಳೆದುಕೊಂಡ ಹಾಗೂ ಸ್ಥಳೀಯರಿಗೆ ಆದ್ಯತೆ ಮೇರೆಗೆ ಉದ್ಯೋಗಾವಕಾಶ ನೀಡಲು ಸಹಕಾರಿ ಬ್ಯಾಂಕ್ಗಳು ಹಿತಾಸಕ್ತಿಗಳಿಂದ ದಿವಾಳಿಯಾಗಿದ್ದು, ಡಿಸಿಸಿ ಬ್ಯಾಂಕ್ ಪುನಶ್ಚೇತನಕ್ಕಾಗಿ ಒತ್ತಾಯಿಸಿ, ಬಡವರ ರಕ್ಷಣೆ ಮತ್ತು ಕೃಷಿ ಉಳಿಸಲು ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಹೊಸ ಸಾಲಕ್ಕಾಗಿ, ಹೆಚ್ಚು ಅನುಕೂಲವಾಗುವ ವಾರ್ಷಿಕ ಕ್ರಿಯಾ ಯೋಜನೆ ರೂಪಿಸುವುದು. ಹೊಸ ಖಾತೆ ತೆರೆಯಲು ನಿರ್ಬಂಧ ತೆಗೆಯಬೇಕು.
ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿಯಲ್ಲಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ ಕೂಡಲೇ ಕೆಲಸ ನೀಡಲು ಮತ್ತು ಮಾಡಿದ ಕೆಲಸಕ್ಕೆ ಸಕಾಲಕ್ಕೆ ಕೂಲಿ ನೀಡಲು, ಕಾಲುಬಾಯಿ ಜ್ವರದಿಂದ ಸತ್ತ ಹಸುಗಳಿಗೆ ರಾಜ್ಯ ಸರ್ಕಾರದಿಂದ 25 ಸಾವಿರ ರು. ಜೊತೆಗೆ ಕೇಂದ್ರ ಸರ್ಕಾರ ಸಹ 25 ಸಾವಿರ ಸೇರಿ ಒಟ್ಟು 50 ಸಾವಿರ ರು. ಪರಿಹಾರಕ್ಕಾಗಿ ಮತ್ತು ಜಾನುವಾರುಗಳ ಗರಿಷ್ಠ ವಿಮೆಯನ್ನು 70 ಸಾವಿರಕ್ಕೆ ಹೆಚ್ಚಿಸಲು ಮತ್ತಿತರರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು, ನ.7 ರಂದು ನಗರದ ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿಗಳ ಕಚೇರಿ ತನಕ ಮೆರವಣಿಗೆ ಮೂಲಕ ತೆರಳಲಾಗುವುದು ಎಂದು ಕೆಪಿಆರ್ಎಸ್ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ತಿಳಿಸಿದ್ದಾರೆ.