ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ವಾಲ್ಮೀಕಿ ಮಹಾಕಾವ್ಯ ಮನುಕುಲಕ್ಕೆ ದಾರಿದೀಪ'

Rashmi Kasaragodu
Updated On : 6 Nov 2013, 12:20 pm


ಕ.ಪ್ರ.ವಾರ್ತೆ   ಮಾಲೂರು   ನ.5
ವಾಲ್ಮೀಕಿಯ ಮಹಾ ಕಾವ್ಯವು ಮನುಕುಲಕ್ಕೆ ದಾರಿ ದೀಪವಾಗಿದ್ದು, ಪ್ರತಿಯೊಬ್ಬರು ಅವರ ಮಹಾ ಕಾವ್ಯ ರಾಮಾಯಣದ ಮರ್ಯಾದ ಪುರುಷನಂತೆ ಬಾಳನ್ನು ಸಾಗಿಸಬೇಕು ಎಂದು ಅಂತಾರಾಷ್ಟ್ರೀಯ ಯೋಗ ಗುರು ಶ್ರೀ ಸೊಹಂ ಗುರೂಜಿ ಹೇಳಿದರು.
ಅವರು ತಾಲೂಕಿನ ಬಾಳಿಗಾನಹಳ್ಳಿ ಪಂಚಾಯ್ತಿ ವ್ಯಾಪ್ತಿಯ ನಾಗೂಂಡಹಳ್ಳಿಯಲ್ಲಿನ ಮಹರ್ಷಿ ವಾಲ್ಮೀಕಿ ಯುವಕರ ಸಂಘವು ಆಯೋಜಿಸಿದ ಎರಡನೇ ವರ್ಷದ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡುತ್ತ ರಾಮಾಯಣ ದರ್ಶನ ದಂತಹ ಕಾವ್ಯವು ಭಾರತೀಯ ಸಂಸ್ಕೃತಿಪ್ರತಿಬಿಂಬವಾಗಿದ್ದು, ಮರ್ಯದಾ ಪುರುಷ ರಾಮ,ಪತಿ ಭಕ್ತಿ ಸೀತೆ, ಸಹೋದರ ಭಾಂದವ್ಯ ತೋರಿಸುವಂತ ಭರತ ದಂತಹ ಕ್ಯಾರೆಕ್ಟರ್ ರಚಿಸಿರುವ ವಾಲ್ಮೀಕಿ ಮಹಾ ಮಹರ್ಷಿ ದೇಶದ ಸಂಸ್ಕೃತಿಯನ್ನು ಪ್ರಪಂಚಕ್ಕೆ ತೋರಿಸಿಕೊಟ್ಟ ಮಹಾ ಮುನಿಯಾಗಿದ್ದರು ಎಂದರು.
ರಾಜ್ಯ ವಾಲ್ಮೀಕಿ ಜನಾಂಗ ಸಂಘದ ಮಹಾ ಪ್ರಧಾನ ಕಾರ್ಯದರ್ಶಿ ಎಸ್. ವೆಂಕಟರಾಮ್ ಮಾತನಾಡಿ ತಾಲೂಕಿನಲ್ಲಿ ನಾಯಕ ಜನಾಂಗದವರು ಪ್ರಭಾವ ಬೀರುವಂತಹ ಸಂಖ್ಯೆಯಲ್ಲಿದ್ದರೂ ಒಗಟ್ಟುಇಲ್ಲದೆ ಸಂಘಟನೆ ಶಕ್ತಿಹೀನವಾಗುತ್ತಿದ್ದೆ.ಸಾಮುದಾಯದ ಮುಖಂಡರುಗಳು ತಮ್ಮಲ್ಲಿರುವ ಭಿನ್ನಮತ ತೊರೆದು ಸಂಘಟನೆಯಲ್ಲಿ ಒಗಟ್ಟನ್ನು ಪ್ರದರ್ಶಿಸಬೇಕು ಎಂದರು.
ತಾಲೂಕಿನಲ್ಲಿ ನಾಯಕ ಜನಾಂಗದ ಕಾಲೋನಿಗಳ ಅಭಿವೃದ್ಧಿ ಹಾಗೂ ವಾಲ್ಮೀಕಿ ಭವನಗಳ ನಿರ್ಮಾಣಕ್ಕಾಗಿ ಸರ್ಕಾರವು 75 ಲಕ್ಷ ರು. ಬಿಡುಗಡೆ ಮಾಡಿದ್ದು, ಎಲ್ಲ ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದ ವೆಂಕಟರಾಮ್ ರವರು ತಾಲೂಕಿನ ಕೇಂದ್ರ ಸ್ಥಾನದಲ್ಲಿ ಶ್ರೀ ವಾಲ್ಮೀಕಿ ಭವನ ನಿರ್ಮಿಸಲು ಬಿಡುಗಡೆಯಾಗಿರುವ ಒಂದು ಕೋಟಿಯಲ್ಲಿ ಈಗಾಗಲೇ 25 ಲಕ್ಷ ರು. ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದು, ಪಟ್ಟಣದಲ್ಲಿ ಭವನಕ್ಕೆ ಜಾಗ ಗುರ್ತಿಸಲಾಗದೆ ಕಾಮಗಾರಿ ವಿಳಂಬವಾಗುತ್ತಿದೆ ಎಂದರು. ನಾಯಕ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿರುವ ನಾಗೋಂಡಹಳ್ಳಿಯಲ್ಲಿನ ನಾಯಕ ಜನಾಂಗದ ಕಾಲೋನಿಯಲ್ಲಿ ಸಿಸಿ ರಸ್ತೆ ಹಾಗೂ ವಾಲ್ಮೀಕಿ ಭವನ ನಿರ್ಮಿಸಲು 16ಲಕ್ಷ ರು.ಗಳ ಯೋಜನೆಗೆ ಮಂಜೂರಾತಿ ನೀಡುವಂತೆ ಸಂಘದ ಮುಖೇನ ರಾಜ್ಯ ಸರ್ಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದ ವೆಂಕಟರಾಮ್ ಸಮುದಾಯದ ಮಕ್ಕಳ  ಉನ್ನತ್ತ ವ್ಯಾಸಂಗಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಇದೇ ಸಂಧರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕರ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಡಾ.ನಾ.ಮುನಿರಾಜು, ಡಾ.ಎನ್.ಟಿ.ನಾರಾಯಣಸ್ವಾಮಿ, ವಿ.ರಮೇಶ್, ಟಿ. ಮುನಿಯಪ್ಪ, ಬಿಜೆಪಿ ವೆಂಕಟಸ್ವಾಮಿ, ಅಣ್ಣಯ್ಯಪ್ಪ, ಟಿ.ಕೆ. ನಾಗರಾಜ್,ಎಸ್.ಎನ್. ನಾಗರಾಜ್,ಎಸ್.ಟಿ.ನಾಗರಾಜ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement