ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಸರ್ಕಾರಿ ಸವಲತ್ತು ಸದುಪಯೋಗವಾಗಲಿ'

Rashmi Kasaragodu
Updated On : 6 Nov 2013, 12:20 pm

ಗೌರಿಬಿದನೂರು: ಸರ್ಕಾರದ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳುವ ಮೂಲಕ ವಾಲ್ಮೀಕಿ ಸಮುದಾಯದವರು ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಮುಂದೆ ಬನ್ನಿ ಎಂದು ವಿಧಾನಸಭೆ ಉಪಾಧ್ಯಕ್ಷ  ಎನ್.ಎಚ್. ಶಿವಶಂಕರರೆಡ್ಡಿ ಕಿವಿಮಾತು ಹೇಳಿದರು.  ತಾಲೂಕಿನ ಮಂಚೇನಹಳ್ಳಿಯಲ್ಲಿ ವಾಲ್ಮೀಕಿ ಸಂಘದ ವತಿಯಿಂದ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭ ಉದ್ಘಾಟಿಸಿ  ಅವರು ಮಾತನಾಡಿದರು. ಇದೇ ವೇಳೆ ವಾಲ್ಮೀಕಿ ಜನಾಂಗದ ಮುಖಂಡರು ಹೋಬಳಿ ಕೇಂದ್ರದಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ಸರ್ಕಾರಿ ಅನುದಾನ ಕೊಡಸಬೇಕೆಂದು ಮನವಿ ಸಲ್ಲಿಸಿದರು.
50 ಲಕ್ಷ ಅನುದಾನ ಭರವಸೆ: ಭವನ ನಿರ್ಮಾಣಕ್ಕೆ ಅನುದಾನ ಕೊಡಿಸಿ ಕೋಡುವುದಾಗಿ ಭರವಸೆ ನೀಡಿದರು. ಜನಾಂಗದ ಅಭಿವೃದ್ಧಿಗೆ ಸರ್ಕಾರ ಮೀಸಲಾತಿ ವಿವಿಧ ಸೌಲಭ್ಯ ಓದಗಿಸಿದ್ದು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು. ಚಿಕ್ಕಬಳ್ಳಪುರ ಶಾಸಕ ಡಾ.ಕೆ.ಸುಧಾಕರ್, ಜಿಲ್ಲಾ ವರಿಷ್ಠಾಧಿಕಾರಿ ಶಿವಪ್ರಸಾದ್ ಸೇರಿದಂತೆ ಮತ್ತಿತರರು ಮಾತನಾಡಿದರು.  ಜಿಪಂ ಉಪಾಧ್ಯಕ್ಷ ರಾಘವೇಂದ್ರ ಹನುಮಾನ್, ನಿವೃತ್ತ ಅಧಿಕಾರಿ  ಬಾಬಣ್ಣ, ವಾಲ್ಮೀಕಿ ನಾಯಕ ಜನಾಂಗದ ಹೋಬಳಿ ಅಧ್ಯಕ್ಷ ಎಚ್.ಎನ್.ಗೋಪಾಲಕೃಷ್ಣ, ತಾಪಂ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ಮತ್ತಿತರರು ಉಪಸ್ಥಿತರಿದ್ದರು.
ಸಂಭ್ರಮದ ಸ್ಮಶಾನಪೂಜೆ
ಕೆಜಿಎಫ್: ಪ್ರತಿ ವರ್ಷದಂತೆ ಕಲ್ಲರೈಮುಳ್ (ಸ್ಮಶಾನಪೂಜೆ)ಯನ್ನು ಸಡಗರದಿಂದ ಆಚರಿಸಲಾಯಿತು. ಕೆಜಿಎಫ್ನಲ್ಲಿ ಹಿಂದೆ ಬ್ರಿಟಿಷರು ಬಿಜಿಎಂಎಲ್ ಚಿನ್ನದಗಣಿ ನಡೆಸುತ್ತಿದ್ದಾಗ ಸಂಸ್ಕೃತಿ, ಆಚರಣೆಗಳನ್ನು ಇಲ್ಲಿನ ಜನರು ಪಾಲಿಸುತ್ತಾ ಬಂದಿದ್ದಾರೆ.  ಅದೇ ರೀತಿ ಚಿನ್ನದ ಗಣಿಯಲ್ಲಿ ಬ್ರಿಟಿಷರು ಮೃತಪಟ್ಟವರಿಗಾಗಿ ಪ್ರತಿವರ್ಷ ನ.2 ರಂದು. ಸ್ಮಶಾನಗಳಲ್ಲಿ ಆಲ್ಸೋಲ್ಸ್ಡೇ ಆಚರಿಸುತ್ತಿದ್ದರು. ಇದನ್ನೇ ಕೆಜಿಎಫ್ ಚಿನ್ನದ ಗಣಿ ಕಾಲೋನಿಗಳು, ನಗರಸಭೆ ವ್ಯಾಪ್ತಿಯ 35 ವಾರ್ಡ್ಗಳ ಸಾರ್ವಜನಿಕರು ಸ್ನಾನ -ಮಡಿ ಮಾಡಿ ಹೊಸಬಟ್ಟೆ ಧರಿಸಿಕೊಂಡು ಮೃತಪಟ್ಟವರಿಗೆ ಇಷ್ಟವಾದ ತಿಂಡಿ-ಫಲಹಾರ ಮಾಡಿಕೊಂಡು ಕುಟುಂಬ ಸಮೇತ ಚಾಂಪಿಯನ್ರೀಫ್ನಲ್ಲಿರುವ ಸ್ಮಶಾನಕ್ಕೆ ತೆರಳಿ, ಸಮಾಧಿ  ಸ್ವಚ್ಛಗೊಳಿಸಿ, ಹೂಗಳಿಂದ ಅಲಂಕರಿಸಿ ದೀಪಾಲಂಕಾರ
ವಿಶೇಷ ಪೂಜೆ ಸಲ್ಲಿಸಿದರು.
ಸಮಿತಿಗೆ ಆಯ್ಕೆ
ಗುಡಿಬಂಡೆ: ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘದ ಅಧ್ಯಕ್ಷ, ವಕೀಲ ಜಿ.ವಿ.ವಿಶ್ವನಾಥ್ ಅವರನ್ನು ನೆಹರು ಯುವ ಕೇಂದ್ರದ ಕೋಲಾರ ಜಿಲ್ಲಾ ಕಾರ್ಯಕ್ರಮ ಸಲಹಾ ಸಮಿತಿ ಅಧಿಕಾರೇತರ  ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement