ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕಡ್ಡಾಯ ಶಾಲಾ ದಾಖಲಾತಿ ಸಮೀಕ್ಷೆ

Rashmi Kasaragodu
Updated On : 7 Nov 2013, 12:54 pm

ಕೋಲಾರ: ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ-2009 ರ ಅನ್ವಯ 6 ರಿಂದ 14 ವರ್ಷ ವಯೋವಾನದ ಎಲ್ಲಾ ಮಕ್ಕಳು ಪ್ರಾಥಮಿಕ ಶಿಕ್ಷಣಕ್ಕೆ ಒಳಪಡಬೇಕಾಗಿರುವುದರಿಂದ ಕಡ್ಡಾಯ ಶಾಲಾ ದಾಖಲಾತಿ ಸಮೀಕ್ಷೆ ನಡೆಸಲಾಗುತ್ತಿದ್ದು ಪೋಷಕರು ಸಮೀಕ್ಷೆ ಸಿಬ್ಬಂದಿಗೆ ನಿಖರವಾದ ಮಾಹಿತಿ ನೀಡಬೇಕೆಂದು ಡಿಡಿಪಿಐ ತಿಳಿಸಿದ್ದಾರೆ. ಮೊದಲನೇ ಹಂತ ಶಾಲಾ ಸಮೀಕ್ಷೆ ನ.7 ರಂದು, ಎರಡನೇ ಹಂತ ಕುಟುಂಬ ಸಮೀಕ್ಷೆ ನ.13ರಿಂದ 17 ರವರೆಗೆ ಹಮ್ಮಿಕೊಂಡಿದ್ದು ತಮ್ಮ ಮನೆಯಲ್ಲಿ, ಅಕ್ಕಪಕ್ಕದ ಮನೆಗಳಲ್ಲಿ, ಗ್ರಾಮಗಳಲ್ಲಿ ಇರುವ 6 ರಿಂದ 16 ವರ್ಷದೊಳಗಿನ ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಬಗ್ಗೆ ಮಾಹಿತಿ ನೀಡಿ ಸಹಕರಿಸಬೇಕೆಂದು ಕೋರಿದ್ದಾರೆ. ಸಮೀಕ್ಷಾ ತಂಡದವರಿಗೆ ಮಾಹಿತಿಯನ್ನು ಒದಗಿಸಿ ಆರ್.ಟಿ.ಇ ಪ್ರಕಾರ ಯಾವುದೇ ಮಗು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಬಾಲ್ಯ ವಿವಾಹಕ್ಕೆ ಮುಂದಾಗಬಾರದು. ಬಾಲ ಕಾರ್ಮಿಕರಾಗಿ ಅವರಿಂದ ದುಡಿಸಿಕೊಳ್ಳುವುದು, ಮಕ್ಕಳನ್ನು ಮಾರಾಟ ಮಾಡುವುದು ಕಾನೂನಿನ ರೀತ್ಯ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement