ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬೀದಿಗೆ ಬಂದ ಖಾಸಗಿ ಬಸ್ ಮಾಲೀಕರ ರಂಪಾಟ

Rashmi Kasaragodu
Updated On : 7 Nov 2013, 12:57 pm


ಚಿಂತಾಮಣಿ: ಖಾಸಗಿ ಬಸ್ಗಳ ಬೀದಿ ರಂಪಾಟದಿಂದ ಸಾರ್ವಜನಿಕರಿಗೆ ಕಿರಿಕಿರಿ ಆಗುತ್ತಿದ್ದರೂ ಪೊಲೀಸರು ಗಮನ ಹರಿಸದಿರುವ ಬಗ್ಗೆ ನಾಗರಿಕರು ಅಸಮದಾನ ವ್ಯಕ್ತಪಡಿಸಿದ್ದಾರೆ.
ನಗರದ ಯೋಗಿನಾರಾಯಣ ವೃತ್ತದ ಬಳಿ ದಿನನಿತ್ಯ ಒಂದಲ್ಲ ಒಂದು ವಿಷಯವಾಗಿ ಖಾಸಗಿ ಬಸ್ ಮಾಲೀಕರ ಜಗಳ ನಡೆಯುತ್ತಿದ್ದು, ಬುಧವಾರ ಇವರ ಬೀದಿ ರಂಪಾಟದಿಂದ ಪ್ರಯಾಣಿಕರು ಹಾಗೂ ಸಾರ್ವಜನಿಕರಿಗೆ ಈ ಪ್ರದೇಶದಲ್ಲಿ ಸಂಚರಿಸಲು ಅಸಾಧ್ಯವಾಯಿತು.
ನ್ಯಾಷನಲ್ ಬಸ್ಸಿನ ಮಾಲೀಕ ನಾಸೀರ್ ಹಾಗೂ ಎಂ.ಬಿ.ಎಸ್ ಬಸ್ಸಿನ ಮಾಲೀಕ ಮತ್ತುಜಾ ಎಂಬವರಿಗೆ ಸೇರಿದ ಖಾಸಗಿ ಬಸ್ಸುಗಳು ಪ್ರತಿ ದಿನ ನಗರದಿಂದ ಬೆಂಗಳೂರು ಮಾರ್ಗವಾಗಿ ಸಂಚರಿಸುತ್ತಿವೆ, ಆದರೆ ಕಳೆದ ಹಲವು ದಿನಗಳಿಂದ ಇಬ್ಬರ ಮಾಲೀಕರಲ್ಲಿ ಸಮಯದ ವಿಷಯ ಮತ್ತು ಸಿಸಿ ಪರ್ಮಿಟ್ ಇಲ್ಲದ ವಿಷಯವಾಗಿ ಬಸ್ಚಾಲಕ, ಕಂಡೆಕ್ಟರ್, ಕ್ಲೀನರ್ಗಳ ನಡುವೆ ಪದೇ ಪದೇ ಮಾತಿನ ಚಕಮುಕಿ ನಡೆಯುತ್ತಿತ್ತು. ಬುಧವಾರ ಏಕಾಏಕಿ 2 ಖಾಸಗಿ ಬಸ್ಸುಗಳ ಮಾಲೀಕರು ಬೀದಿಗಿಳಿದು ಮಾತಿನ ಸಮರ ನಡೆಸಿ, ಕೈ ಕೈ ಮಿಲಾಯಿಸಿದ್ದರಿಂದ ಈ ಭಾಗದಲ್ಲಿ ಹಲವು ಸಮಯ ಬಿಗುವಿನ ವಾತಾವರಣ ನಿರ್ಮಾಣಗೊಂಡಿತು.
ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯ: ಪೊಲೀಸ್ ಠಾಣೆಯ ಹತ್ತಿರವಿರುವ ಯೋಗಿನಾರಾಯಣ ವೃತ್ತದ ಬಳಿ ಖಾಸಗಿ ಬಸ್ಗಳ ರೌಡಿ ದರ್ಬಾರ್ನಿಂದ ಸಾರ್ವಜನಿಕರ ಮೇಲೆ ಪ್ರಭಾವ ಬೀರುವ ಘಟನೆಗಳು ನಡೆಯುತ್ತಿದ್ದರು ಸ್ಥಳೀಯ ಪೊಲೀಸರು ತಮಗೇನು ಅರಿಯದಂತೆ ಮೌನವಹಿಸಿದ ಬಗ್ಗೆ ನಾಗರಿಕರು ಕಿಡಿ ಕಾರಿದ್ದಾರೆ.
ಆರ್ಟಿಒ ಅಧಿಕಾರಿಗಳ ಜಾಣಕುರುಡು ತನ: ಚಿಂತಾಮಣಿ ಮಾರ್ಗವಾಗಿ ಸಂಚರಿಸುವ ಬಹುತೇಕ ಖಾಸಗಿ ಬಸ್ಗಳಿಗೆ ಗ್ರಾಮಾಂತರ ಪ್ರದೇಶದ ಮುಖಾಂತರ ಆರ್ಟಿಒ ಪರವಾನಗಿ ನೀಡಿದೆ. ಆದರೆ ಹಲವು ಅಧಿಕಾರಿಗಳ ವೈಫಲ್ಯ ಹಾಗೂ ಸ್ಥಳೀಯ ರಾಜಕಾರಣಿಗಳ ಒತ್ತಡದಿಂದ ಖಾಸಗಿ ಬಸ್ಗಳ ಹಲವು ಮಾಲೀಕರು ರಾಜಾರೋಷವಾಗಿ ಮುಖ್ಯ ರಸ್ತೆಯಲ್ಲೆ ಚಿಂತಾಮಣಿಯಿಂದ ಬೆಂಗಳೂರು ಮತ್ತು ಮುರುಗಮಲ್ಲ ಮುಖ್ಯ ಮಾರ್ಗಗಳಲ್ಲಿ ಸಂಚರಿಸುತ್ತಿದ್ದರು ಆರ್ಟಿಒ ಅಧಿಕಾರಿಗಳು ಜಾಣಕುರುಡರಂತೆ ವರ್ತಿಸುತ್ತಿರುವುದಕ್ಕೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸಾರ್ವಜನಿಕರ ಪ್ರಶ್ನೆ: ಲಂಗು ಲಗಾಮು ಇಲ್ಲದೆ ಹಲವು ಖಾಸಗಿ ಬಸ್ಗಳಲ್ಲಿ ನಿಗದಿತ ಸೀಟುಗಳಿಗಿಂತ ಹೆಚ್ಚಾಗಿ, ನೂರಾರು ಪ್ರಯಾಣಿಕರನ್ನು ದನಗಳಂತೆ ತುಂಬಿಕೊಂಡು ಸಂಚರಿಸುತ್ತಿರುವುದರಿಂದ ಜನಸಾಮಾನ್ಯರಿಗೆ ಪ್ರಾಣ ರಕ್ಷಣೆಯಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲವೆಂದು ಸಾರ್ವಜನಿಕರ ಪ್ರಶ್ನಿಸಿದ್ದಾರೆ.
ಇನ್ನು ಮುಂದಾದರು ಸಂಬಂಧಪಟ್ಟ ಅಧಿಕಾರಿಗಳು ಖಾಸಗಿ ಬಸ್ಗಳ ಆರ್ಭಟಕ್ಕೆ ಕಡಿವಾಣ ಹಾಕಿ ಜನಸಾಮಾನ್ಯರ ನೆಮ್ಮದಿಗೆ ಹಾಗೂ ಸುಗುಮ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

 ಎನ್. ಬಾಬು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement