ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಭಾರತ ಗೆಲ್ಲಿಸಿ ಬೃಹತ್ ಸಮಾವೇಶದ ಟಿಕೆಟ್ ಮಾರಾಟ

Rashmi Kasaragodu
Updated On : 7 Nov 2013, 12:55 pm

ಕೋಲಾರ: ಬೆಂಗಳೂರಿನಲ್ಲಿ ನ.17 ರಂದು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರ ರ್ಯಾಲಿ ಹಿನ್ನೆಲೆಯಲ್ಲಿ ಹೊರ ತಂದಿರುವ ಕೂಪನ್ಗಳನ್ನು ನಗರದಲ್ಲಿ ಬಿಜೆಪಿಯ ಅಲ್ಪಸಂಖ್ಯಾತರ ಮೋರ್ಚಾದಿಂದ ಮಾರಾಟ ಮಾಡಲಾಯಿತು.
ಪ್ರತಿ ಕೂಪನ್ಗೆ 10 ರು. ನಿಗದಿ ಪಡಿಸಲಾಗಿದ್ದು ರ್ಯಾಲಿಗೆ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂಬ ಉದ್ದೇಶದಿಂದ ಕೂಪನ್ ಮಾರಾಟಕ್ಕೆ ಚಾಲನೆ ನೀಡಲಾಗಿದ್ದು ಈಗಾಗಲೇ ನೂರಾರು ಕೂಪನ್ಗಳನ್ನು ನಗರದ ಅಲ್ಪಸಂಖ್ಯಾತರು ಖರೀದಿ ಮಾಡಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆಂದು ಬಿಜೆಪಿ ರಾಜ್ಯ ಅಲ್ಪಸಂಖ್ಯಾತರ ಮೋರ್ಚಾ ಕಾರ್ಯದರ್ಶಿ ಜಾಮೀನುಲ್ಲಾ ಖಾನ್ ತಿಳಿಸಿದ್ದಾರೆ.
ಕೂಪನ್ ವಿತರಣೆ ಅಭಿಯಾನದಲ್ಲಿ ಮುಖಂಡರಾದ ನವೀದ್, ಏಜಾಜ್ ಪಾಷ, ಕೋಲಾರ ನಗರ ಅಧ್ಯಕ್ಷ ಜಯಂತಿಲಾಲ್, ತಾಲೂಕು ಅಧ್ಯಕ್ಷ ಚಿನ್ನಾಪುರ ನಾರಾಯಣಸ್ವಾಮಿ, ವಿಜಯಕುಮಾರ್, ಮುಖಂಡರಾದ ಡಿ.ಆರ್. ನಾಗರಾಜ್, ಕೆ.ಎನ್. ಸುರೇಶ್, ಶಂಕರ್ನಾರಾಯಣ, ಸುರೇಶ್ ಕುಮಾರ್, ಎನ್. ಚಲಪತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement