ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರಾಜಿ ಸಂಧಾನ ಕಾರ್ಯಕ್ರಮ

Rashmi Kasaragodu
Updated On : 7 Nov 2013, 12:55 pm

ಶಿಡ್ಲಘಟ್ಟ: ನ್ಯಾಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿಯಿಂದ ಬೃಹತ್ ಜನತಾ ನ್ಯಾಯಾಲಯದ ರಾಜಿ ಸಂಧಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪ್ರಕರಣಗಳ ಪಕ್ಷಗಾರರು ಇಂತಹ ಸುವರ್ಣಾವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಎಸ್. ಮಹೇಶ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಸೆಪ್ಟಂಬರ್ 2013 ರಿಂದ 23 ನೇ ನವೆಂಬರ್ 2013 ರವರಿಗೆ ಬೃಹತ್ ಜನತಾ ನ್ಯಾಯಾಲಯದ ಕಾರ್ಯಕ್ರಮವನ್ನು ರಾಷ್ಟ್ರದ ಎಲ್ಲಾ ಅಧೀನ ನ್ಯಾಯಾಲಯಗಳಲ್ಲಿ ಆಯೋಜಿಸಿದ್ದು, 23 ನೇ ನವೆಂಬರ್ 2013 ರವರಿಗೆ ಪ್ರತಿದಿನ ಕಾರ್ಯಕ್ರಮ ಅಯೋಜಿಸಲಾಗಿದೆ ಎಂದರು.
ಶುಲ್ಕ ಪಾವತಿಗೆ ಸೂಚನೆ
ಕೋಲಾರ: 2013-14 ನೇ ಸಾಲಿನಲ್ಲಿ ಪ್ರಥಮ ಪದವಿ ಬಿ.ಎ, ಬಿ.ಕಾಂ, ಬಿ.ಬಿ.ಎಂ ಹಾಗೂ ಬಿ.ಎಸ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕವನ್ನು ನ.7 ರಿಂದ 9 ರವರೆಗೆ ಮಾತ್ರ ಪಾವತಿಸಿಕೊಳ್ಳಲಾಗುವುದು ಎಂದು ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ. ವಿದ್ಯಾರ್ಥಿಗಳು ಶುಲ್ಕ ವಿವರಗಳಿಗಾಗಿ ಕಾಲೇಜಿನ ಸೂಚನ ಫಲಕವನ್ನು ನೋಡಿ ಅದರಂತೆ ಶುಲ್ಕ ಪಾವತಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆಎಸ್ಆರ್ಟಿಸಿಗೆ ಬಹುಮಾನ
ಕೋಲಾರ: ಕನ್ನಡ ರಾಜ್ಯೋತ್ಸವ ಪ್ರಯುಕ್ತ ನ.1 ರಂದು ನಗರದಲ್ಲಿ ನಡೆದ ಸ್ತಬ್ದ ಚಿತ್ರಗಳ ಮೆರವಣಿಗೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೋಲಾರ ವಿಭಾಗದಿಂದ ಭಾಗವಹಿಸಿದ್ದ ಸ್ತಬ್ದ ಚಿತ್ರಕ್ಕೆ ಅತ್ಯುತ್ತಮ ಬಹುಮಾನ ಲಬಿಸಿದ್ದು ಜಿಲ್ಲಾಧಿಕಾರಿ ಡಿ.ಕೆ. ರವಿ ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ಕನ್ನಡ ಕ್ರಿಯಾ ಸಮಿತಿಪದಾಧಿಕಾರಿಗಳಾದ ಅಧ್ಯಕ್ಷ ಗೋಪಾಲಗೌಡ, ಉಪಾಧ್ಯಕ್ಷ ಡಿ. ಶಿವಕುಮಾರ್, ಪಿ. ನಾರಾಯಣಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement