ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜಿಪಂ ಉಪ ಕಾರ್ಯದರ್ಶಿ ವಿರುದ್ಧ ಪ್ರತಿಭಟನೆ

Rashmi Kasaragodu
Updated On : 8 Nov 2013, 1:08 am

ಕೋಲಾರ: ಜಿಪಂ ಉಪ ಕಾರ್ಯದರ್ಶಿ ಬದನೂರು ಅವರು ರೈತ ಸಂಘದ ವಿದ್ಯಾರ್ಥಿ ವಿಭಾಗದ ಮುಖಂಡ ಹೂವಳ್ಳಿ ನಾಗರಾಜ್ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆಂದು ಆರೋಪಿಸಿ ಗುರುವಾರ ನಗರದಲ್ಲಿ ರೈತ ಸಂಘದಿಂದ ಪ್ರತಿಭಟನೆ ನಡೆಯಿತು.
ನಗರದ ಬೃದಾಂವನ ಸರ್ಕಲ್ನಲ್ಲಿರುವ ಬಿ.ಆರ್. ಅಂಬೇಡ್ಕರ್ ಬಾಲಕಿಯರ ವಿದ್ಯಾರ್ಥಿನಿಲಯದ ಸಮಸ್ಯೆಗಳ ನಿವಾರಣೆಗಾಗಿ ಮುಂದಾದ ಹೂವಳ್ಳಿ ನಾಗರಾಜ್ ಬಗ್ಗೆ ಜಿಪಂ ಉಪ ಕಾರ್ಯದರ್ಶಿ ಬದನೂರು ಮತ್ತು ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಅಧಿಕಾರಿ ಗುರುಮೂರ್ತಿ ಇಲ್ಲಸಲ್ಲದ ಆರೋಪ ಮಾಡಿ ವಿದ್ಯಾರ್ಥಿಗಳ ಹಕ್ಕು ದಮನಕ್ಕೆ ಯತ್ನಿಸಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದರು. ಅಧಿಕಾರಿಗಳ ಪ್ರತಿಕೃತಿ ದಹನ ಮಾಡಿದ ರೈತ ಸಂಘದ ಕಾರ್ಯಕರ್ತರು, ಕೂಡಲೇ ಈ ಇಬ್ಬರು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ಮುಂದುವರೆಸುವುದಾಗಿ ಸರ್ಕಾರಕ್ಕೆ ಗಡುವು ನೀಡಿದ್ದಾರೆ.
ವಿದ್ಯಾರ್ಥಿ ನಿಲಯಗಳ ಸಮಸ್ಯೆಗಳನ್ನು ಬಗೆಹರಿಸದ ಅಧಿಕಾರಿಗಳು ವಿದ್ಯಾರ್ಥಿ ಮುಖಂಡನ ಮೇಲೆ ದೌರ್ಜನ್ಯ ಮಾಡಿರುವುದು ಖಂಡನೀಯ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ವಂಚನೆ ಮಾಡಿ ವಿದ್ಯಾರ್ಥಿಗಳು ತಿನ್ನುವ ಅನ್ನವನ್ನು ಕಸಿದುಕೊಳ್ಳುತ್ತಿರುವ ಗುತ್ತಿಗೆದಾರ ಜೊತೆ ಅಧಿಕಾರಿಗಳು ಶಾಮೀಲು ಆಗಿದ್ದಾರೆಂದು ದೂರಿದರು. ರೈತ ಸಂಘದ ಜಿಲ್ಲಾಧ್ಯಕ್ಷ ನಾರಾಯಣಗೌಡ, ಮೂರಂಡಹಳ್ಳಿ ಶಿವಾರೆಡ್ಡಿ, ಕೆಂಬೋಡಿ ಕೃಷ್ಣೆಗೌಡ, ವಕ್ಕಲೇರಿ ಹನುಮಪ್ಪ, ನೀಲಟೂರು ರಮೇಶ್, ನರಸಾಪುರ ಪುರುಷೋತ್ತಮ್, ಮುಳಬಾಗಿಲು ರಂಜಿತ್ ಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement