ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಸ್ ದುರಂತದಲ್ಲಿ ಮೃತಪಟ್ಟ ವ್ಯಕ್ತಿ ಅಂತ್ಯ ಸಂಸ್ಕಾರ

Rashmi Kasaragodu
Updated On : 8 Nov 2013, 1:09 am

ಮುಳಬಾಗಲು: ಕಳೆದ ವಾರ ಆಂಧ್ರಪ್ರದೇಶ ಮೆಹಬೂಬ್ ನಗರ ಬಳಿ ನಡೆದ ಅಪಘಾತದಲ್ಲಿ ತಾಲೂಕಿನ ಚದುಮನಹಳ್ಳಿ ಗ್ರಾಮದ ಕೆ.ಎಸ್. ನಂಜುಂಡಗೌಡ (28) ಮೃತರಾಗಿದ್ದು ಅವರ ಪ್ರಾರ್ಥಿವ ಶರೀರ ಬುಧವಾರ ಬೆಳಿಗ್ಗೆ ಹೈದರಾಬಾದ್ ನಗರದಿಂದ ಸ್ವಗ್ರಾಮಕ್ಕೆ ಸೇರಿತು. ಮೃತರ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ ನಡೆಯಿತು, ಮೃತರು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿದ್ದು ಕಂಪನಿಯ ಕೆಲಸದ ಮೇರೆಗೆ ಹೈದರಾಬಾದ್ಗೆ ತೆರೆಳುತ್ತಿದ್ದರು. ಮೃತರಿಗೆ ಮೂರು ವರ್ಷದ ಹಿಂದೆ ವಿವಾಹವಾಗಿದ್ದು ಎರಡು ವರ್ಷದ ಮಗುವಿದೆ. ನಂಜುಂಡಗೌಡರ ಸಾವಿನ ಕಾರಣ ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ. ಮೃತರಿಗೆ ತಾಯಿ, ಪತ್ನಿ, ಮಗು ಇದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement