ಬಸ್ಸುಗಳ ಡಿಕ್ಕಿ: 8 ಮಂದಿಗೆ ಗಾಯ
ಮುಳಬಾಗಲು: ಪಟ್ಟಣದ ಹೊರವಲಯದ ಮಾರಾಂಡಹಳ್ಳಿ ಗ್ರಾಮದ ಬಳಿ ಎರಡು ಬಸ್ಗಳ ನಡುವೆ ಡಿಕ್ಕಿಯಲ್ಲಿ 8 ಮಂದಿ ಗಾಯಗೊಂಡಿರುವ ಘಟನೆ ಗುರುವಾರ ಸಂಜೆ 6 ಗಂಟೆಗೆ ನಡೆದಿದೆ. ಕಾಳಹಸ್ತಿಯಿಂದ ಬೆಂಗಳೂರಿಗೆ ತೆರಳಿದ್ದ ಆಂಧ್ರ ಸಾರಿಗೆ ಮತ್ತು ಬೆಂಗಳೂರಿನಿಂದ ಚಿತ್ತೂರು ಕಡೆ ಹೋಗುತ್ತಿದ್ದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಗಾಯಾಳುಗಳನ್ನು ಮುಳಬಾಗಲು ಸರ್ಕಾರಿ ಆಸ್ಪತ್ರೆ ಸೇರಿಸಲಾಗಿದೆ.
9 ರಿಂದ 14 ರ ವರೆಗೆ ವಿದ್ಯುತ್ ವ್ಯತ್ಯಯ
ಮಾಲೂರು: ಪಟ್ಟಣದ 220 ಕಿ.ವ್ಯಾಟ್ಸ್ ಸ್ಷೇಷನ್ನಲ್ಲಿನ ಎ.ಬಿ.ಸಿ.ಕೇಬಲ್ಗಳ ದುರಸ್ತಿ ಕಾರ್ಯ ನಡೆಸಬೇಕಾಗಿರುವುದರಿಂದ ನ. 9 ರಿಂದ 14 ರ ವರೆಗೆ ನಿತ್ಯದ ವಿದ್ಯುತ್ ಪೂರೈಕೆಯಲ್ಲಿ ಆಡಚಣೆ ಉಂಟಾಗಲಿದೆ ಎಂದು ಬೆಸ್ಕಾಂ ಎ.ಇ.ಇ.ವಾಸುದೇವ್ ತಿಳಿಸಿದ್ದಾರೆ. ಶನಿವಾರದಿಂದ ಗುರುವಾರವರೆಗೂ ಪ್ರತಿನಿತ್ಯ ಮಧ್ಯಾಹ್ನ 12 ರಿಂದ ಸಂಜೆ 5 ರವರೆಗೆ ಪಟ್ಟಣ ಸೇರಿದಂತೆ ಇಲ್ಲಿನ ಸ್ಟೇಷನ್ನಿಂದ ಪ್ರಸಾರವಾಗುವ ಪ್ರದೇಶಗಳಲ್ಲಿ ವಿದ್ಯುತ್ ಪ್ರಸಾರ ವಿರುವುದಿಲ್ಲ. ಗ್ರಾಹಕರು ಸಹಕರಿಸಬೇಕೆಂದು ಎಇಇ ವಾಸುದೇವ್ ಕೋರಿದ್ದಾರೆ.
ಆಕ್ಷೇಪಣಾ ಅರ್ಜಿ ಸಲ್ಲಿಕೆಗೆ ಸೂಚನೆ
ಮಾಲೂರು: ಹಕ್ಕು ಮತ್ತು ಅಕ್ಷೇಪಣಾ ಅರ್ಜಿಗಳನ್ನು ಸಲ್ಲಿಸುವ ಅಥವಾ ಸ್ವೀಕರಿಸುವ ಅವಧಿಯನ್ನು ಚುನಾವಣಾ ಆಯೋಗದ ಆದೇಶದ ಮೇರೆಗೆ ಈ ತಿಂಗಳ 15 ರ ತನಕ ವಿಸ್ತರಿಸಲಾಗಿದ್ದು, ಪದವೀಧರರು ಈ ವಿಸ್ತರಣೆಯ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಹಸೀಲ್ದಾರ್ ಡಾ. ಸುಧಾ ತಿಳಿಸಿದ್ದಾರೆ. ದಿನಾಂಕ 1-11-2013 ಕ್ಕೆ ಮೂರು ವರ್ಷ ಪೂರ್ಣಗೊಂಡಿರುವ ಪದವಿಧರರು ಈ ಅವಕಾಶವನ್ನು ಉಪಯೋಗಿಸಿಕೊಳ್ಳಲು ತಹಸೀಲ್ದಾರ್ ಡಾ. ಸುಧಾ ಅವರು ಕೋರಿದ್ದಾರೆ.