ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮದುವೆ ಮನೆಯಲ್ಲಿ ಕಳವು; ಇಬ್ಬರಿಗೆ ಗೂಸಾ

Rashmi Kasaragodu
Updated On : 8 Nov 2013, 1:06 am

ಚಿಂತಾಮಣಿ: ಮದುವೆ ಮನೆಯಲ್ಲಿ ತಾಳಿ ಮತ್ತು ಬಂಗಾರದ ಒಡವೆ ಕದಿಯಲು ಯತ್ನಿಸಿದ ಇಬ್ಬರಿಗೆ ನಾಗರಿಕರು ಗೂಸ ನೀಡಿ ಪೊಲೀಸರ ವಶಕ್ಕೆ ನೀಡಿರುವ ಘಟನೆ ಪಟ್ಟಣದ ದೊಡ್ಡಪೇಟೆ ರಸ್ತೆಯ ಆರ್ಯವೈಶ್ಯ ಕಲ್ಯಾಣ ಮಂಟಪದಲ್ಲಿ ನಡೆದಿದೆ.
ಪಟ್ಟಣದ ಹೊರ ವಲಯದ ಕರಪ್ಪಲ್ಲಿ ಗ್ರಾಮದ ನಾಗರಾಜ್ ಎಂಬವರ ಕುಟುಂಬದ ಮದುವೆಯನ್ನು ಪಟ್ಟಣದ ಆಜಾದ್ ಚೌಕ ಹತ್ತಿರದ ಆರ್ಯವೈಶ್ಯ ಕಲ್ಯಾಣ ಮಂಟಪದಲ್ಲಿಏರ್ಪಡಿಸಲಾಗಿತ್ತು. ರಾತ್ರಿ 11 ಗಂಟೆ ವೇಳೆಯಲ್ಲಿ ಪಟ್ಟಣದ ಅಗ್ರಹಾರ ನಿವಾಸಿಗಳಾದ ಷಾಕೀಭ್ ಪಾಷ ಹಾಗೂ ತಜ್ಮಲ್ ಪಾಷ ಎಂಬಿಬ್ಬರು ಕಲ್ಯಾಣ ಮಂಟಪದ ಒಳನುಗ್ಗಿ ಮದುವೆಯಲ್ಲಿ ಭಾಗವಹಿಸಿದ್ದವರ ಚಿನ್ನದ ಒಡವೆಗಳನ್ನು ದೋಚಿ ಪರಾರಿಯಾಗಲು ಯತ್ನಿಸಿದಾಗ ನಾಗರಿಕರು ಹಿಡಿದು ಹಿಗ್ಗಾ ಮುಗ್ಗಾ ಥಳಿಸಿ ಪಟ್ಟಣದ ಪೊಲೀಸರ ವಶಕ್ಕೆ ನೀಡಿದ್ದಾರೆ. ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮುಂದಿವರೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement