ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶಾಸಕರಿಂದ ಅಹವಾಲು ಸ್ವೀಕಾರ

Rashmi Kasaragodu
Updated On : 8 Nov 2013, 1:08 am

ಚಿಕ್ಕಬಳ್ಳಾಪುರ: ಸರ್ಕಾರದ ಸವಲತ್ತುಗಳು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳ ಜತೆಗೆ ಜನರ ಜವಾಬ್ದಾರಿಯು ಪ್ರಮುಖವಾಗಿದೆ ಎಂದು ಶಾಸಕ ಡಾ.ಕೆ. ಸುಧಾಕರ್ ಅಭಿಪ್ರಾಯ ಪಟ್ಟರು. ಚಿಕ್ಕಬಳ್ಳಾಪುರ ವಿಧಾನಭಾ ಕ್ಷೇತ್ರದ ಮಂಚೇನಹಳ್ಳಿ ಹೋಬಳಿಯ ಬಾಲರೆಡ್ಡಿಹಳ್ಳಿ ನರಸಿಂಹಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.
ಬಾಲರೆಡ್ಡಿಹಳ್ಳಿಯಲ್ಲಿ ಎಸ್ಸಿಪಿ ಅಥವಾ ಜಿಪಂ ವತಿಯಿಂದ ಕಾಂಕ್ರಿಟ್ ರಸ್ತೆ, ದಿನ್ನೇನಹಳ್ಳಿ ಕ್ರಾಸ್ನಿಂದ ತೇಕಲಹಳ್ಳಿ, ಬಾಲರೆಡ್ಡಿಹಳ್ಳಿ, ಕಂಬಾಲಹಳ್ಳಿ ಮಾರ್ಗಕ್ಕೆ ನಬಾರ್ಡ್ ಅಥವಾ ಪಿಎಂಜಿಎಸ್ವೈ ಅಡಿ ರಸ್ತೆ ನಿರ್ಮಿಸಿಕೊಡಲಾಗುವುದು ಎಂದರು.
ಪಿ.ಎನ್. ಪ್ರಕಾಶ್ರೆಡ್ಡಿ, ಪಿ.ಎನ್. ಪೆದ್ದರೆಡ್ಡಿ, ಗ್ರಾಪಂ ಅಧ್ಯಕ್ಷೆ ಗಂಗಮ್ಮ, ಮೋಹನ್ ಕುಮಾರ್, ಪಿಡಿಒ ನಾರಾಯಣಪ್ಪ, ನಾರಾಯಣಸ್ವಾಮಿ, ಸಿದ್ದಪ್ಪ, ನಂಜುಂಡಪ್ಪ, ರಾಧಮ್ಮ ಗಂಗಾಧರಪ್ಪ,  ಗೋಪಾಲ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement