ಶಿಕ್ಷಣ ಕೊಡಿಸುವಲ್ಲಿ ಪೋಷಕರ ತಾತ್ಸಾರ ಸಲ್ಲ
ಗೌರಿಬಿದನೂರು: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವಲ್ಲಿ ಪೋಷಕರು ತಾತ್ಸಾರ ತೋರಬಾರದೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಯ್ಯಪರೆಡ್ಡಿ ಸಲಹೆ ನೀಡಿದರು.
ಅವರು ತಾಲೂಕಿನ ಕಾಚಿಮಾಚೇನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ಡೆನ್ಮಾರ್ಕ್ ರಾಷ್ಟ್ರದ ಕೆಮಿನೋವಾ ಆಗ್ರೋ ಕೆಮಿಕಲ್ಸ್ ಕಂಪನಿಗೆ ಪ್ರಶಂಸೆ ಪತ್ರ ನೀಡಿ ಮಾತನಾಡಿ, ಮಕ್ಕಳು ದಿನದ 24ನಾಲ್ಕು ಗಂಟೆಗಳಲ್ಲಿ 5ಗಂಟೆಗಳು ಮಾತ್ರ ಶಾಲೆಯಲ್ಲಿ ಇದ್ದು ಉಳಿದ 19ಗಂಟೆಗಳು ಪೋಷಕರ ಬಳಿ ಇರುತ್ತಾರೆ, ಆದ್ದರಿಂದ ಪೋಷಕರು ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ನೀಡಬೇಕೆಂದರು. ಶಾಲೆಯ ವಿದ್ಯಾರ್ಥಿಗಳಿಗೆ ಕೆಮಿನೋವಾ ಕಂಪೆನೀ ಅವರು ಸುಮಾರು 45ಸಾವಿರ ರು. ವೆಚ್ಚಿದಲ್ಲಿ ಪಂಪು, ಮೋಟಾರ್ ಜತೆಗೆ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಿದ್ದಕ್ಕೆ ಅಭಿನಂದಿಸಿದರು.
ಕಂಪನಿಯ ಅಧಿಕಾರಿ ಲಾರ್ಸ್ ಎರಿಕ್ ಕ್ರೂಸ್ ಪಡರ್ಸನ್ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟು ಪುಸ್ತಕಗಳನ್ನು ವಿತರಿಸಿದರು. ಮತ್ತೊಬ್ಬ ಅಧಿಕಾರಿ ಬಿ.ಕೆ. ಸ್ವಾಮಿ ಮಾತನಾಡಿದರು. ಡಾ.ಇಂದೂಲ್ಕರ್, ಬೊಮ್ಮಣ್ಣ, ಗಂಗರಾಜು, ದೊಡ್ಡಬಳ್ಳಾಪುರದ ಕೃಷಿ ಅಧಿಕಾರಿ ಅನಸೂಯ, ಮುಖ್ಯೋಪಾಧ್ಯಾಯ ನರಸಿಂಹಮೂರ್ತಿ ಇದ್ದರು.