ಅಂತೂ ಇಂತೂ ರೈಲು ಬಂತು...
ಶ್ರೀನಿವಾಸಪುರ: ತಾಲೂಕಿನ ಜನತೆಯೆ ಕನಸಾಗಿದ್ದ ರೈಲು ನನಸಾಗಿ ಶುಭ ಶುಕ್ರವಾರ ರೈಲು ಚಾಲನೆಗೆ ಮುಕ್ತಿ ಸಿಕ್ಕಿ ಸಾವಿರಾರು ಪ್ರಯಾಣಿಕರು ರೈಲನ್ನು ಸ್ವಾಗತಿಸಿ ಆದರದಿಂದ ಭರಮಾಡಿಕೊಂಡು ಸಂತಸ ವ್ಯಕ್ತಪಡಿಸಿದರು.
ಸುಮಾರು ವರ್ಷಗಳಿಂದ ರೈಲ್ವೆ ಕಾಮಗಾರಿ ಕೆಲಸವನ್ನು ಕೈಗೆತ್ತುಕೊಂಡು ರೈಲು ಬರುವಿಕೆಗಾಗಿ ಕಾದಿದ್ದ ಜನರಿಗೆ ಕೇಂದ್ರ ರೈಲ್ವೆ ರಾಜ್ಯ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಣ್ಣ ಕೈಗಾರಿಕಾ ಮತ್ತು ಮದ್ಯಮ ಕೈಗಾರಿಕಾ ಸಚಿವ ಕೆ.ಎಚ್. ಮುನಿಯಪ್ಪ ಶುಕ್ರವಾರ ಸ್ವತಃ ರೈಲಿನಲ್ಲಿ ಪ್ರಯಾಣಿಸಿ ಶ್ರೀನಿವಾಸಪುರ ರೈಲ್ವೆ ನಿಲ್ದಾಣಕ್ಕೆ ಬಂದು ಶಭ ಕೋರಿದರು. ರೈಲಿನ ಬೋಗಿಯಿಂದ ಸಚಿವರು ಹೊರ ಬರಲು ಯತ್ನಿಸಿದಾಗ ನೂಕುನುಗ್ಗುಲು ಪ್ರಾರಂಭವಾದಾಗ ಪೊಲೀಸರು. ಮಧ್ಯೆ ಪ್ರದೇಶಿಸಿ ಜನರನ್ನು ಚದುರಿಸಲು ಹರ ಸಾಹಸ ಪಡಬೇಕಾಯಿತು. ರೈಲಿಗೆ ಸಮಯದ ಅಭಾವ ಇದ್ದುದರಿಂದ ಬಂದ ಕ್ಷಣಾರ್ಧದಲ್ಲೆ ಶ್ರೀನಿವಾಸಪುರ ರೈಲ್ವೆ ನಿಲ್ದಾಣದಿಂದ ಮಯಾವಾಯಿತು. ವೈ.ಎ. ನಾರಾಯಣಸ್ವಾಮಿ, ಬಿ. ವೆಂಕಟರೆಡ್ಡಿ, ದಿಂಬಾಲ ಅಶೋಕ್, ಕೆ.ಕೆ. ಮಂಜುನಾಥರೆಡ್ಡಿ, ಬಿ.ಎಂ. ವೆಂಕಟೇಶ್ ಇದ್ದರು.