ವಾಟಾಳ್ಗೆ ಇಲ್ಲದ ಆಹ್ವಾನ
ಶಿಡ್ಲಘಟ್ಟ: 1993ರಲ್ಲಿ ಸ್ಥಗಿತಗೊಂಡ ನ್ಯಾರೊ ಗೇಜ್ ರೇಲ್ವೆ ಹಳಿಗಳನ್ನು ತೆಗೆದು ಶಾಶ್ವತವಾಗಿ ರೇಲನ್ನು ಚರಿತ್ರೆಯ ಪುಟಗಳಲ್ಲಿ ಸೇರಿಸಲು ರೈಲ್ವೆ ಇಲಾಖೆ ಕೈಗೊಂಡ ನಿರ್ಧಾರವನ್ನು ಪ್ರತಿಭಟಿಸಿ ರೇಲನ್ನು ಪುನರಾರಂಭಿಸಲು ಕೋಲಾರ ಜಿಲ್ಲೆಯಾದ್ಯಂತ ಸಂಚರಿಸಿ ಸಂಘ ಸಂಸ್ಥೆಗಳನ್ನು ಸಂಪರ್ಕಿಸಿ ರೇಲ್ವೆ ಹೋರಾಟ ಆರಂಭಿಸಿದ ರೇಲ್ವೆ ಇಲಾಖೆಯ ನಡುಪಹಳ್ಳಿ ಮುನಿಶಾಮಿ, ಕನ್ನಡ ಚಳುವಳಿಯ ಮುಖಂಡ ವಾಟಾಳ್ ನಾಗರಾಜ್ರನ್ನು ಜಿಲ್ಲೆಗೆ ಕರೆತಂದು ಜಿಲ್ಲೆಯಾದ್ಯಂತ ಕನ್ನಡಿಗರಲ್ಲಿ ಹೋರಾಟದ ಕಿಚ್ಚನ್ನು ಮೂಡಿಸಿ ಇಡೀ ಜಿಲ್ಲೆಯನ್ನು 3 ಬಾರಿ ಬಂದ್ ಮಾಡಿ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದ ವಾಟಾಳ್ ನಾಗರಾಜ್ರನ್ನು ಸ್ಮರಿಸಬೇಕಾದ ಜಿಲ್ಲೆಯ ಜನತೆ ಮತ್ತು ಸರ್ಕಾರ ಮರೆತಿರುವುದು ಶೋಚನೀಯವಾಗಿದೆ. ಉದ್ಘಾಟನೆಯಂದು ಕನ್ನಡ ಚಳುವಳಿಯ ಮುಖಂಡ ವಾಟಾಳ್ ನಾಗರಾಜ್ರನ್ನು ಕರೆಸಿ ಸನ್ಮಾನಿಸಿ ಸತ್ಕರಿಸಲು ಜಿಲ್ಲೆಯ ಕನ್ನಡ ಪರ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.