ಆಹ್ವಾನ ಪತ್ರಿಕೆ ಬಿಡುಗಡೆ
ಗೌರಿಬಿದನೂರು: ಕರುನಾಡ ಕನ್ನಡಿಗರ ರಕ್ಷಣಾ ವೇದಿಕೆಯಿಂದ ಅದ್ಧೂರಿ ರಾಜ್ಯೋತ್ಸವ ಕಾರ್ಯಕ್ರಮದ ಬಾಂಧವ್ಯ ಶೀರ್ಷಿಕೆ ಆಹ್ವಾನ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಪಟ್ಟಣದ ಮರಿಗಮ್ಮ ದೇವಸ್ಥಾನದ ಆವರಣದಲ್ಲಿ ನಡೆಯಿತು. ಆಕರ್ಷಕವಾದ ಆಹ್ವಾನ ಪತ್ರಿಕೆಯನ್ನು ದಂಡಾಧಿಕಾರಿ ಎನ್. ಭಾಸ್ಕರ್ ಬಿಡುಗಡೆ ಮಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಂ. ರವಿನಾರಾಯಣರೆಡ್ಡಿ, ಮಾನಸ ಆಸ್ಪತ್ರೆಯ ವೈದ್ಯ ಶಶಿಧರ್, ಪುರಸಭೆ ಮುಖ್ಯಾಧಿಕಾರಿ ಹನುಮಂತೇಗೌಡ, ಉದ್ಯಮಿ ಅಶ್ವತ್ಥನಾರಾಯಣಶೆಟ್ಟಿ, ನಿವೃತ್ತ ಪ್ರಿನ್ಸಿಪಾಲ್ ಬಿ.ಎನ್. ರಾಮಯ್ಯ, ಡಿ.ಎನ್. ವೆಂಕಟರೆಡ್ಡಿ, ಗೋಪಿನಾಥ್, ಬಾಲಾಜಿ ಇದ್ದರು.