ಕಮಲಹಾಸನ್ ಹುಟ್ಟುಹಬ್ಬದ ಪ್ರಯುಕ್ತ ನೋಟ್ ಬುಕ್ ವಿತರಣೆ
ಕೆಜಿಎಫ್: ನಟ ಕಮಲಹಾಸನ್ ಅವರ 59ನೇ ಹುಟ್ಟುಹಬ್ಬದ ಪ್ರಯುಕ್ತ ನಗರದ ಕಮಲಹಾಸನ್ ಅಭಿಮಾನಿಗಳ ಸಂಘದ ವತಿಯಿಂದ ಬಡ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಮಲಹಾಸನ್ ಅಭಿಮಾನಿಗಳು ಬೆಮೆಲ್ನಗರದ ಸಮೀಪದ ಹ್ಯಾಪಿ ಹೋಮ್ ಆಶ್ರಮದಲ್ಲಿ ಮಕ್ಕಳಿಗೆ ಅನ್ನದಾನ ಮಾಡಿ ನಂತರ ಬಿಜಿಎಂಎಲ್ ಚಿನ್ನದ ಗಣಿ ವ್ಯಾಪ್ತಿಯ ಚಾಂಪಿಯನ್ರೀಫ್ನ ಎಚ್.ಎ. ಬ್ಲಾಕ್ನಲ್ಲಿರುವ ಸರ್ಕಾರಿ ಶಾಲೆಯ 60 ಬಡ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಿಸಿದರು.
ಇದೇ ವೇಳೆ 25 ಬಡ ಕುಟುಂಬದ ಮಹಿಳೆಯರಿಗೆ ಉಚಿತವಾಗಿ ಸೀರೆ ಹಂಚುವ ಮೂಲಕ ಪದ್ಮಶ್ರೀ ಪ್ರಶಸ್ತಿ ಪಡೆದ ನಟ ಕಮಲಹಾಸನ್ ಅವರ 59ನೇ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು. ನಗರದ ಕಮಲ್ಹಾಸನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಬಾಬು, ಕಾರ್ಯದರ್ಶಿ ಮೂರ್ತಿ, ರಾಮು, ಗೋಪಾಲ್, ಸರವಣ, ಕುಮಾರ್, ವೆಂಕಟೇಶ್, ಮಂಜುನಾಥ್, ಸುರೇಶ್ಬಾಬು ಇದ್ದರು.