'ಗುರು ಶಿಷ್ಯರ ಸಂಬಂಧ ಶಾಶ್ವತವಾಗಿರಲಿ'
ಚಿಂತಾಮಣಿ: ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಸಂಬಂಧ ಶಾಶ್ವತವಾಗಿರಲು ಹಳೆ ವಿದ್ಯಾರ್ಥಿಗಳ ಸಂಘ ಅಗತ್ಯ ಎಂದು ನಿವೃತ್ತ ಶಿಕ್ಷಕ ಶ್ರೀಹರಿ ಹೇಳಿದರು.
ಪಟ್ಟಣದ ಎಂ.ಸಿ.ಆಂಜನೇಯರೆಡ್ಡಿ ಕಲ್ಯಾಣ ಮಂಟಪದಲ್ಲಿ ಇಂದು ನಡೆದ ಮಹಾತ್ಮ ಗಾಂಧಿ ಸರ್ಕಾರಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿಗಳ ಒಕ್ಕೂಟದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಿ.ರಂಗಯ್ಯ ಮಾತನಾಡಿ, ಸಮಾಜದಲ್ಲಿ ಉತ್ತಮ ಪ್ರಜೆಗಳನ್ನು ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದಿದೆ. ಗುರು ಶಿಷ್ಯರ ಸಂಬಂಧ ಗಟ್ಟಿಗೊಳ್ಳಲು ಇಂತಹ ವೇದಿಕೆಗಳು ಅಗತ್ಯ ಎಂದರು.
ಈ ಸಂದರ್ಭದಲ್ಲಿ ಹಳೇ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷ ಎಸ್.ಎನ್.ಶ್ರೀರಾಮರೆಡ್ಡಿ, ಗೌರವಾಧ್ಯಕ್ಷ ಡಾ.ಮಹಬೂಬ್ ಪಾಷ, ಕಾರ್ಯಾಧ್ಯಕ್ಷ ಸಿ.ಆರ್ ಅಬ್ದುಲ್ ರಷೀದ್, ಉಪಾಧ್ಯಕ್ಷ ಎಸ್.ನಾರಾಯಣಸ್ವಾಮಿ(ಸಿದ್ದು),ಪ್ರಧಾನ ಕಾರ್ಯದರ್ಶಿ ಸತ್ಯ ಪ್ರಸಾದ್, ಸಹ ಕಾರ್ಯದರ್ಶಿ ಡಿ.ಗೋಪಾಲರೆಡ್ಡಿ, ಸಂಚಾಲಕ ಡಾ. ಆರ್.ಶ್ರೀನಿವಾಸ್, ಖಜಾಂಚಿ ಕೆ.ಎಲ್.ಪ್ರಸಾದ್ ಗುಪ್ತ ಸೇರಿದಂತೆ ಡಾ. ಪಾಷಾ, ಗಜಾನನ ವೃತ್ತದ ಬಾಬಣ್ಣ ಇದ್ದರು.