ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬೇನಾಮಿ ಹೆಸರಲ್ಲಿ ನಗರಸಭೆ ನೌಕರರ ವಂಚನೆ; ಭಕ್ತವತ್ಸಲಂ ಆರೋಪ

Rashmi Kasaragodu
Updated On : 10 Nov 2013, 12:22 pm

ಕೆಜಿಎಫ್: ನಗರಸಭೆ ಆಡಳಿತಾಧಿಕಾರಿಯಿಂದ ಅನುಮತಿ ಪಡೆಯದೆ ನಗರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಬೆನಾಮಿ ಹೆಸರಲ್ಲಿ ಹೊರಗುತ್ತಿಗೆ ಪಡೆದು ಕೊಳವೆ ಬಾವಿಗೆ ಅಳವಡಿಸುವ ಮೋಟಾರು, ಪಂಪು ಮತ್ತು ಇತರೆ ಸಾಮಗ್ರಿಗಳನ್ನು ಪೂರೈಸುವಲ್ಲಿ ನಗರಸಭೆಯ ಲಕ್ಷಾಂತರ ಅನುದಾನ ದುರುಪಯೋಗ ಪಡಿಸಿಕೊಂಡಿದ್ದು, ಈ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಮಾಜಿ ಶಾಸಕ ಎಂ. ಭಕ್ತವತ್ಸಲಂ ಕೋಲಾರ ಲೋಕಾಯುಕ್ತರಿಗೆ ದೂರು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ನಗರದಲ್ಲಿ ಕುಡಿಯುವ ನೀರಿನ ಆಹಾಕಾರವಿದ್ದು ಕೊಳವೆ ಬಾವಿ ಕೊರೆಸಲು ಜಿಯಾಲಜಿಸ್ಟ್ ಅವರನ್ನು ಕರೆಸಿ ಸ್ಥಳವನ್ನು ಗುರುತಿಸದೆ ನಗರಸಭೆ ಅಧಿಕಾರಿಗಳು ಇಷ್ಟಾನುಸಾರ ಕೊಳವೆ ಬಾವಿ ಕೊರೆಸುವುದರಿಂದ ನೀರು ಸಿಗದೆ ವಿಫಲವಾಗಿದ್ದು ಸರ್ಕಾರದ ಹಣ ವೆಚ್ಚಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಗರಸಭೆ ನೌಕರರಾದ ಗಂಟ್ಲಪ್ಪ, ವಡಿವೇಲು ಮತ್ತಿತರರು ಬೆನಾಮಿ ಹೆಸರಲ್ಲಿ ಗುತ್ತಿಗೆ ಪಡೆದು ಫೆನಾಯಿಲ್, ಬ್ಲೀಚಿಂಗ್ ಪೌಡರ್, ಡಿಡಿಟಿ ಪೌಡರ್ ಖರೀದಿಸುವಲ್ಲಿ ಹಾಗೂ ಕೊಳವೆ ಬಾವಿ ದುರಸ್ತಿ, ಜೆಸಿಬಿ ವಾಹನ ದುರಸ್ತಿ ಮಾಡುವಲ್ಲಿ ನಗರಸಭೆ ಅನುದಾನ ದುರುಪಯೋಗ ಮಾಡಿರುವುದಲ್ಲದೆ ನಗರಸಭೆಗೆ ಸೇರಿದ ಕಾರನ್ನು ದುರಸ್ತಿಗೊಳಿಸಲು ಕಾರಿನ ಚಾಲಕ ಸುಮಾರು 4 ಲಕ್ಷ ಹಣವನ್ನು ಗುತ್ತಿಗೆ ಆಧಾರದ ಮೇಲೆ ಪಡೆದು ದುರುಪಯೋಗ ಪಡೆಸಿಕೊಂಡಿರುವ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತ ಡಿವೈಎಸ್ಪಿ ಅವರಿಗೆ ದೂರು ನೀಡಿರುವುದಾಗಿ ಎಂ. ಭಕ್ತವತ್ಸಲಂ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement