ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಎಟಿಎಂನಲ್ಲಿ ನಕಲಿ ನೋಟು; ಬೆಚ್ಚಿ ಬಿದ್ದ ಗ್ರಾಹಕ

Rashmi Kasaragodu
Updated On : 11 Nov 2013, 12:51 pm

ಬಂಗಾರಪೇಟೆ: ಪಟ್ಟಣದಲ್ಲಿ ನಕಲಿ ನೋಟುಗಳ ಹಾವಳಿ ಮಿತಿ ಮೀರಿದ್ದರೂ ಸಂಬಂಧಪಟ್ಟ ಇಲಾಖೆ ಮೌನಕ್ಕೆ ಶರಣಾಗಿರುವುದು ಗ್ರಾಹಕರನ್ನು ಬೆಚ್ಚಿ ಬೀಳಿಸುವಂತಾಗಿದೆ.
ನಕಲಿ ನೋಟುಗಳ ಬಗ್ಗೆ ಬ್ಯಾಂಕುಗಳು ಗ್ರಾಹಕರಿಗೆ ಪರಿಶೀಲಿಸಿ ಐದು ನೂರು ಮತ್ತು ಒಂದು ಸಾವಿರ ನೋಟುಗಳನ್ನು ಪಡೆಯಿರಿ ಎಂದು ತಿಳಿವಳಿಕೆ ನೀಡುತ್ತಿದೆ ಆದರೆ ಬ್ಯಾಂಕಿನ ಎಟಿಎಂಗಳಲ್ಲೇ ನಕಲಿ ನೋಟುಗಳು ದೊರೆಯುತ್ತಿದೆ. ಗ್ರಾಹಕರಿಗೆ ತಿಳಿವಳಿಕೆ ನೀಡುವ ಬ್ಯಾಂಕುಗಳೇ ಜನರಿಗೆ ನಕಲಿ ನೋಟುಗಳನ್ನು ವಿತರಿಸಿದರೆ ಗ್ರಾಹಕರು ಯಾರನ್ನು ನಂಬಬೇಕು ಎಂಬುದು ಗ್ರಾಹಕರ ಪ್ರಶ್ನೆ.
ಪಟ್ಟಣದ ಪಾನಿಪೂರಿ ವ್ಯಾಪಾರಿ ರಮೇಶ್ ಎಂಬುವರು ತಾಪಂ ಕಚೇರಿ ಬಳಿಯಿರುವ ಐಸಿಐಸಿಐ ಬ್ಯಾಂಕಿನ ಎಟಿಎಂನಲ್ಲಿ 5ಸಾವಿರ ಹಣ ಡ್ರಾ ಮಾಡಿದ್ದಾರೆ. ಅದರಲ್ಲಿ ನಾಲ್ಕು ನೋಟುಗಳು ಒಂದುಸಾವಿರದ್ದು ಬಂದಿದ್ದು ಮತ್ತು ಎರಡು ನೋಟು ಐದು ನೂರದ್ದು ಬಂದಿದೆ ಈ ಪೈಕಿ ಸಾವಿರ ನೋಟಿನ ಮುಖ ಬೆಲೆಯ ಒಂದು ನೋಟು ನಕಲಿಯಾಗಿದೆ.
ರಾಷ್ಟ್ರೀಕೃತ ಬ್ಯಾಂಕಿನ ಎಟಿಎಂನಲ್ಲೇ ನಕಲಿ ನೋಟುಗಳು ಬಂದರೆ ಯಾರನ್ನು ಪ್ರಶ್ನಿಸಬೇಕು ಎಂದು ಪತ್ರಕರ್ತರ ಬಳಿ ನಕಲಿ ನೋಟನ್ನು ಪ್ರದರ್ಶಿಸಿದರು. ಬ್ಯಾಂಕಿನ ಎಟಿಎಂನಲ್ಲೇ ನಕಲಿ ನೋಟು ಪತ್ತೆಯಾಗಿರುವುದರಿಂದ ಈ ಬಗ್ಗೆ ಮೇಲಾಧಿಕಾರಿಗಳು ತನಿಖೆ ಮಾಡಿ ಮತ್ತೆ ಇಂತಹ ಪ್ರಕರಣ ಮರುಕಳಿಸದಂತೆ ಎಚ್ಚರವಹಿಸಬೇಕೆಂದು ಅವರು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement