ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕನಕ ಜಯಂತಿ; ಪೂರ್ವಭಾವಿ ಸಭೆ

Rashmi Kasaragodu
Updated On : 11 Nov 2013, 12:50 pm

ಚಿಂತಾಮಣಿ: ಕನಕ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ಸಹಕಾರ ನೀಡಬೇಕೆಂದು ತಾಲೂಕು ಕುರುಬರ ಸಂಘದ ಅಧ್ಯಕ್ಷ ಎ.ಎನ್. ನಾಗರಾಜ್ ಕರೆ ನೀಡಿದರು.
ಪಟ್ಟಣದ ಕನಂಪಲ್ಲಿ ಡೈರಿ ಮುಂಭಾಗದಲ್ಲಿರುವ ತಾಲೂಕು ಕುರುಬರ ಸಂಘದ ಸಮುದಾಯ ಭವನದಲ್ಲಿ ಭಾನುವಾರ ತಾಲೂಕಿನ ವ್ಯಾಪ್ತಿಯ ವಿವಿಧ ಹೋಬಳಿ ಮಟ್ಟದ ಕುರುಬ ಸಮಾಜದ ಮುಖಂಡರ ಸಭೆ ಕರೆದು ಅಧ್ಯಕ್ಷ ಎ.ಎನ್. ನಾಗರಾಜ್ ಅಧ್ಯಕ್ಷತೆಯಲ್ಲಿ 20 ರಂದು ಕನಕ ಜಯಂತಿ ಆಚರಿಸಲು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಶೇಷತೆ: ಕನಕ ಜಯಂತಿ ದಿನ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಸ್ಥಬ್ದ ಚಿತ್ರಗಳೊಂದಿಗೆ ವಿಶೇಷ ಹೂವಿನ ಅಲಂಕಾರ, ವೀರಗಾಸೆ, ಡೊಳ್ಳುಕುಣಿತ, ತಲೆ ಮೇಲೆ ತೆಂಗಿನ ಕಾಯಿ ಹೊಡೆಯುವ ಪವಾಡ, ಜಾನಪದ ನೃತ್ಯ ಹಾಗೂ ಮಂಗಳ ವಾದ್ಯಗಳೊಂದಿಗೆ ವಿಜೃಂಭಣೆಯಿಂದ ಕಾರ್ಯಕ್ರಮ ಆಚರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ರಾಮಚಂದ್ರಪ್ಪ, ಸುಮಿತ್ರಮ್ಮ, ರಮಾದೇವಿ ಮಂಜುನಾಥ್,ನಟರಾಜ್, ಚಂದ್ರಪ್ಪ, ದಿನೇಶ್, ಸಂತೆಕಲ್ಲಹಳ್ಳಿ ರಾಜಣ್ಣ, ತಿಪ್ಪಣ್ಣ, ಪ್ರಕಾಶ್, ಚನ್ನಕೇಶವಪುರ ರಾಜಣ್ಣ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement