ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ

Rashmi Kasaragodu
Updated On : 11 Nov 2013, 12:50 pm

ಬಂಗಾರಪೇಟೆ: ಕಾಮಸಮುದ್ರ ಜಿಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ರಾಷ್ಟೀಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಲ್ಲಿ 2 ಕೋಟಿ ಅನುದಾನ ಮಂಜೂರಾಗಿದ್ದು, ಇದರಲ್ಲಿ ಸಮಸ್ಯೆ ಇರುವ ಕಡೆ ಕೊಳವೆಬಾವಿಗಳನ್ನು ಕೊರೆಸಿ ಸಮಸ್ಯೆ ನಿವಾರಿಸುವುದಾಗಿ ಜಿಪಂ ಸದಸ್ಯ ಸಿಮೋಲ್ ಮೋಹನ್ ಮೂರ್ತಿ ಹೇಳಿದರು.
ಬೋಯಿಸೊಣ್ಣೆನಹಳ್ಳಿ ಗ್ರಾಮದಲ್ಲಿ 8ಲಕ್ಷ ವೆಚ್ಚದಲ್ಲಿ ಕೊರೆಸಿರುವ ಕೊಳವೆ ಬಾವಿಗೆ ಚಾಲನೆ ನೀಡಿ ಮಾತನಾಡಿ, ಹಂತ ಹಂತವಾಗಿ ಕೊಳವೆ ಬಾವಿಗಳನ್ನು ಕೊರೆಸುವ ಕಾರ್ಯ ನಡೆಯಲಿದೆ. ಕೇತಗಾನಹಳ್ಳಿ ಪಂಚಾಯ್ತಿಗೆ 42ಲಕ್ಷ, ಕಾಮಸಮುದ್ರ ಪಂ 40 ಲಕ್ಷ, ತೊಪ್ಪನಹಳ್ಳಿ ಪಂ 40 ಲಕ್ಷ, ದೋಣಿಮಡಗು ಪಂ- 22ಲಕ್ಷ ಹಾಗೂ ಘಟ್ಟಮಾದಮಂಗಲ ಪಂಚಾಯ್ತಿಗೆ 60 ಲಕ್ಷ ಮಂಜೂರಾಗಿದ್ದು ಇದು ಸಮರ್ಪಕವಾಗಿ ಅನುಷ್ಠಾನಗೊಂಡಲ್ಲಿ ನೀರಿನ ಸಮಸ್ಯೆ ನೀಗಲಿದೆ ಎಂದರು.
ಪಂಚಾಯ್ತಿ ಸದಸ್ಯ ಡಾ.ಲಕ್ಷ್ಮೀನಾರಾಯಣ, ಧನಲಕ್ಷ್ಮಿ, ನಾರಾಯಣರೆಡ್ಡಿ, ನಾಗರಾಜ್, ಆಂಜನೇಯಪ್ಪ, ವೆಂಕಟರಾಮ್, ಶ್ರೀರಾಮಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement