ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಹೆಚ್ಚಿನ ಆದ್ಯತೆ
ಕ.ಪ್ರ.ವಾರ್ತೆ ಟೇಕಲ್ ನ. 10
ಮಾಲೂರು ತಾಲೂಕಿನ ಗ್ರಾಮೀಣ ಪ್ರದೇಶದ ಬಹುತೇಕ ಬಾಗಗಳಲ್ಲಿ ಕುಡಿಯುವ ನೀರಿನ ಭವಣೆ ಕಡಿಮೆಯಾಗಿದ್ದು, ಕೆಲವು ಕಡೆ ಕೊಳವೆ ಬಾವಿ ಕೊರೆಸಲಾಗುತ್ತಿದೆ ಎಂದು ಶಾಸಕ ಕೆ.ಎಸ್. ಮಂಜುನಾಥಗೌಡ ತಿಳಿಸಿದರು.
ಕೆಜಿ ಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು 232 ಕೊಳವೆ ಬಾವಿಗಳನ್ನು ಕೊರೆಸಿದ್ದು ಅದರಲ್ಲಿ 170 ಕೊಳವೆ ಬಾವಿಗಳಲ್ಲಿ ಕುಡಿಯುವ ನೀರು ಸಿಕ್ಕಿದೆ ಎಂದರು. ಜಿಪಂ ಸದಸ್ಯೆ ರತ್ನಮ್ಮ ನಂಜೇಗೌಡ ಮಾತನಾಡಿ, ಕುಡಿಯುವ ನೀರಿಗಾಗಿ ಅಂದಾಜು 4.5ಕೋಟಿ ರುಪಾಯಿ ಅನುದಾನದಲ್ಲಿ 32 ಓವರ್ ಹೆಡ್ ಟ್ಯಾಂಕ್, ಪಂಪು, ಮೋಟಾರ್, ಪೈಪ್ ಲೈನ್ ಮಂಜೂರಾಗಿವೆ ಎಂದು ತಿಳಿಸಿದರು. ಅಂಗನವಾಡಿಗೆ ಭೇಟಿ: ಶಾಸಕ ಮಂಜುನಾಥಗೌಡರು ಯಲುವಗುಳಿ ಗ್ರಾಮದಲ್ಲಿ ಶಿಥಿಲವಾದ ಅಂಗನವಾಡಿ ಕಟ್ಟಡ ಪರಿಶೀಲನೆ ನಡೆಸಿದರು. ಈ ಸಮಯದಲ್ಲಿ ತಾಪಂ ಮಾಜಿ ಅಧ್ಯಕ್ಷ ಕೆ.ವೈ. ನಂಜೇಗೌಡ, ಜಿಪಂ ವತಿಯಿಂದ ಶಿಥಿಲ ಕಟ್ಟಡ ದುರಸ್ತಿ ಮಾಡಿಕೊಡುವುದಾಗಿ ತಿಳಿಸಿದರು. ತಾಪಂ ಮಾಜಿ ಅಧ್ಯಕ್ಷ ಕೆ.ವೈ. ನಂಜೇಗೌಡ, ತಾಪಂ ಸದಸ್ಯೆ ನಿರ್ಮಲ ಆಂಜಿನಪ್ಪ, ಆರ್. ರಾಜಣ್ಣ, ಆನೇಪುರದ ಹನುಮಂತಪ್ಪ, ಬಿ.ಜಿ. ಮುನಿಶಾಮಿಗೌಡ, ಕ್ಷೇತ್ರೇನಹಳ್ಳಿ ಗ್ರಾಪಂ ಅಧ್ಯಕ್ಷ ರಾಮಕೃಷ್ಣಪ್ಪ, ಎಸ್.ಜಿ. ರಾಮಮೂರ್ತಿ, ಮಿಟ್ಟಿಗಾನಹಳ್ಳಿ ರಾಮಕೃಷ್ಣಪ್ಪ, ವೆಂಕಟೇಶಪ್ಪ, ಪದ್ಮಾಶ್ರೀರಾಮ್, ಮಂಜುನಾಥ್, ಕೆ.ಜಿ. ಹಳ್ಳಿಯ ಸತೀಶ್, ಕೆ. ಮಂಜುನಾಥ್ ಇದ್ದರು.