ಗ್ರಾಮಲೆಕ್ಕಾಅಧಿಕಾರಿಗಳಿಂದ ರೈತರ ಸುಳಿಗೆ; ಆರೋಪ
ಶ್ರೀನಿವಾಸಪುರ: ಸಣ್ಣ ಮತ್ತು ಆತೀ ಸಣ್ಣ ರೈತರಿಗೆ ಸರ್ಕಾರದಿಂದ ಕಂದಾಯ ಇಲಾಖೆ ಮೂಲಕ ನೀಡುತ್ತಿರುವ ಒಂದು ಸಾವಿರ ರು.ಗಳ ಚೆಕ್ ನೀಡಲು ಕಡ್ಡಾಯವಾಗಿ ಹಣ ನೀಡಬೇಕಾದ ಸ್ಥಿತಿ ಇದೆ ಎಂದು ರೈತರು ದೂರಿದ್ದಾರೆ.
ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ನಷ್ಟವುಂಟಾದ ರೈತರಿಗೆ ಪರಿಹಾರ ನೀಡುವ ಜವಾಬ್ದಾರಿಯನ್ನು ಕಂದಾಯ ಇಲಾಖೆಯ ಗ್ರಾಮಲೆಕ್ಕಾಧಿಕಾರಿಗಳಿಗೆ ನೀಡಿದ್ದು, ಇವರು ರೈತರಿಂದ ನೂರು, ಇನ್ನೂರು ರು. ವಸೂಲಿ ಮಾಡುತ್ತಿದ್ದಾರೆ.
ಶನಿವಾರ ಮತ್ತು ಭಾನುವಾರ ರಜಾ ಇದ್ದರೂ ಹಳೇ ತಾಲೂಕು ಕಚೇರಿಯಲ್ಲಿ ಮಧ್ಯವರ್ತಿಗಳನ್ನಿಟ್ಟುಕೊಂಡು ರೈತರಿಂದ ಬಲವಂತವಾಗಿ ಹಣ ವಸೂಲಿ ಮಾಡುತ್ತಿದ್ದಾರೆ. ಕೆಲ ರೈತರಿಗೆ ಬ್ಯಾಂಕ್ ಖಾತೆ ಇಲ್ಲದಿರುವುದರಿಂದ ಕೆಲವು ಖಾಸಗಿ ಬಡ್ಡಿ ವ್ಯವಹಾರಸ್ಥರು ಲಗ್ಗೆ ಹಾಕಿ 150 ರು.ಗಳನ್ನು ಪಡೆದು, 850 ರು.ಗಳನ್ನು ನೀಡುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸಿ ರೈತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕೆಂದು ರೈತರು ಮನವಿ ಮಾಡಿದ್ದಾರೆ.