ಬಸ್ಗಳ ಮುಖಾಮುಖಿ; ಹಲವರಿಗೆ ಗಾಯ
ಕೋಲಾರ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಎರಡು ಬಸ್ಸುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಹಲವರು ಗಾಯಗೊಂಡಿರುವ ಘಟನೆ ಭಾನುವಾರ ಬೆಳಿಗ್ಗೆ ನಗರದ ಟೇಕಲ್ವೃತ್ತದಲ್ಲಿ ನಡೆದಿದೆ.
ಬೆಳಿಗ್ಗೆ ಸುಮಾರು 5.45ರಲ್ಲಿ ಟೇಕಲ್ ಸರ್ಕಲ್ನಲ್ಲಿ ಮುಳಬಾಗಿಲು ಡಿಪೋಗೆ ಸೇರಿದ ಬಸ್ಸು ಕೋಲಾರದಿಂದ ಬೆಂಗಳೂರಿಗೆ ತೆರಳಲು ಕ್ಲಾಕ್ ಟವರ್ ಮಾರ್ಗವಾಗಿ ಟೇಕಲ್ವೃತ್ತದತ್ತ ವೇಗವಾಗಿ ಬರುತ್ತಿದ್ದಾಗ ಅದೇ ವೇಳೆಗೆ ಟೇಕಲ್ ರಸ್ತೆಯಿಂದ ಬರುತ್ತಿದ್ದ ಮತ್ತೊಂದು ಮಂಡ್ಯ ಡಿಪೋಗೆ ಸೇರಿದ ಸರ್ಕಾರಿ ಬಸ್ಸು ಮುಖಾಮುಖಿಯಾಗಿದ್ದರಿಂದ ಅಪಘಾತ ಸಂಭವಿಸಿದೆ.
ಮುಳಬಾಗಿಲು ಡಿಪೋಗೆ ಸೇರಿದ ಬಸ್ನಲ್ಲಿದ್ದ ವೋಲ್ವೋ ಕಂಪನಿಯ ಸೆಕ್ಯೂರಿಟಿ ಗಾರ್ಡ್ ಆಗಿರುವ ಮುದುವಾಡಿ ಗ್ರಾಮದ ವೆಂಕಟಾದ್ರಿ ಎಂಬುವರಿಗೆ ತೀವ್ರ ಗಾಯಗಳಾಗಿದ್ದು ಜಿಲ್ಲಾ ಎಸ್.ಎನ್.ಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದೇ ಬಸ್ಸಿನ ಕಂಡೆಕ್ಟರ್ ಕುಮಾರಪ್ಪ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ಸೇರಿಸಲಾಗಿದೆ. ಮಂಡ್ಯ ಡಿಪೋಗೆ ಸೇರಿದ ಬಸ್ ಚಾಲಕ ಪುರುಷೋತ್ತಮ್ ಮತ್ತು ಕಂಡಕ್ಟರ್ ಅಚ್ಯುತ ಭಟ್ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಸಂಚಾರಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.