ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮೂಲ ಸೌಲಭ್ಯಕ್ಕೆ ಒತ್ತು: ಶಾಸಕ ಕೊತ್ತನೂರು

Rashmi Kasaragodu
Updated On : 11 Nov 2013, 12:50 pm

ಮುಳಬಾಗಲು: ದಾನಿಗಳು ನೀಡಿದ ಕೊಡುಗೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಕೊತ್ತೂರು ಜಿ. ಮಂಜುನಾಥ್ ಹೇಳಿದರು.
ಪಟ್ಟಣದ ಡಿವಿಜಿ ವೃತ್ತದಲ್ಲಿ ಅಖಿಲ ಭಾರತ ಅಯ್ಯಪ್ಪ ಸೇವಾ ಸಮಿತಿಯಿಂದ ಹಮ್ಮಿಂಡಿದ್ದ  ಶಬರಿಮಲೈ ಅನ್ನದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಯಲ್ಪಾಡು ಕಾಶೀವಿಶ್ವೇಶ್ವರ ದೇವಾಲಯದ ಪಂಡಿತ ವೆಲ್ಲಾಲ ಸತ್ಯನಾರಾಯಣಶಾಸ್ತ್ರಿ ಆಶೀರ್ವಚನ ನೀಡಿ, ಭಾರತ ಸಂಸ್ಕೃತಿ ಭಕ್ತಿ ಮಾರ್ಗದಲ್ಲಿ ಶ್ರೀಮಂತವಾದ ಪರಂಪರೆಯನ್ನು ಹೊಂದಿದೆ, ಭಕ್ತಿ ಶಿಸ್ತು, ಸಂಯಮ, ನೆಲೆಯ ಮೇಲೆ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ದೇವರನ್ನು ಸಂದರ್ಶಿಸುವ ಶ್ರೀಮಂತ ಭಕ್ತಿ ಪರಂಪರೆ ನಮ್ಮದಾಗಿದೆ ಎಂದರು.
ತಹಸೀಲ್ದಾರ್ ಡಿ.ವಿ. ರಾಮಮೂರ್ತಿ, ರಾಜ್ಯ ಅಖಿಲ ಭಾರತ ಅಯ್ಯಪ್ಪ ಸೇವಾ ಸಂಘದ ಕಾರ್ಯದರ್ಶಿ ಕೆ.ಕೆ. ಫಣೆಕರ್, ಕಲ್ಲುಪಲ್ಲಿ ಪ್ರಕಾಶ್, ಪುರಸಭೆ ಮುಖ್ಯಾಧಿಕಾರಿ ಅಶೋಕ್ ಕುಮಾರ್, ಕೆ. ದೊಡ್ಡೆಗೌಡ, ಪಿ.ಬಿ. ಸುಬ್ರಮಣ್ಯಂ ಎಂ.ಆರ್. ಶ್ರೀನಿವಾಸ್, ಕೆ.ಎಸ್. ಗಣೇಶ್, ಟೆ.ಎಂ. ಮಂಜುನಾಥ್, ತಾಯಲೂರು, ಬಲ್ಲ,ನಂಗಲಿ ಬೈರಕೂರು, ಅಣೆಹಳ್ಳಿ ಶಾಖೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಹುಂಡಿ ಹಣ ಕಳವು: ಮುಳಬಾಗಲು: ತಾಲೂಕಿನ ದಾಸರೇನಹಳ್ಳಿಯಲ್ಲಿ ನೂತನ ನಿರ್ಮಿತ ಆಂಜನೇಯಸ್ವಾಮಿ ದೇವಾಲಯದಲ್ಲಿ ಶನಿವಾರ ರಾತ್ರಿ ಹುಂಡಿ ಹೊಡೆದು ಕಳವು ಮಾಡಿರುವ ಘಟನೆ ವರದಿಯಾಗಿದೆ.
ಭಾನುವಾರ ದೇವಾಲಯದ ಬಾಗಿಲು ತೆರೆದ ಅರ್ಚಕ ಬೇವಹಳ್ಳಿ ಮನೋಹರ್ ದೇವಾಲಯದಲ್ಲಿ ಕಳವಾಗಿರುವ ಕುರಿತು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ನಾಲ್ಕು ವರ್ಷದ ಹಿಂದೆ ಗ್ರಾಮಸ್ಥರು, ದಾನಿಗಳು ಸೇರಿ ನಿರ್ಮಿಸಿದ್ದ ದೇವಾಲಯದ ಹುಂಡಿಯಲ್ಲಿ ಎರಡು ಲಕ್ಷ ರು.ಗಳಿಗೂ ಹೆಚ್ಚಿನ ಹಣ ಸಂಗ್ರಹವಾಗಿದ್ದು ದೇವಾಲಯದ ಮುಂದೆ ಸಮುದಾಯ ಭವನ ನಿರ್ಮಾಣ ಮಾಡಲು ಉದ್ದೇಶಿಸಲಾಗಿತ್ತು ಎಂದು ಉತ್ತನೂರು ಗ್ರಾಪಂ ಅಧ್ಯಕ್ಷ ಪೆದ್ದಪ್ಪಯ್ಯ ತಿಳಿಸಿದ್ದಾರೆ, ಮುಳಬಾಗಲು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement