ರಕ್ತದಾನ ಮಾಡಿ ಜೀವ ಉಳಿಸಿ'
ಗುಡಿಬಂಡೆ: ಅಪಘಾತಗಳು ಸಂಭವಿಸಿಯೋ ಅಥವಾ ರಕ್ತಹೀನತೆಯಿಂದಲೋ ಪರದಾಡುವವರ ಜೀವ ಉಳಿಸಲು 18 ವರ್ಷ ತುಂಬಿದ ಪ್ರತಿಯೊಬ್ಬರು ರಕ್ತದಾನ ಮಾಡಿ ಮಾನವೀಯತೆ ಮೆರೆಯಬೇಕೆಂದರು. ಪಟ್ಟಣದ ಮಿನಿವಿಧಾನ ಸೌಧ ಆವರಣದಲ್ಲಿ ಚಿಕ್ಕಬಳ್ಳಾಪುರ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಮಾಜಿ ಯೋಧರ ಸಂಘದ ಸಹಯೋಗದಲ್ಲಿ ಮಾಜಿ ಸೈನಿಕ ದಿ. ಚೌಡಪ್ಪರವರ ಸ್ಮರಣಾರ್ಥ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ತಹಸೀಲ್ದಾರ್ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆಯ ಸೇವಾ ಕಾರ್ಯಗಳಲ್ಲಿ ತೊಡಗಿರುವುದು ಶ್ಲಾಘನೀಯ ಎಂದರು. ಜಿ.ವಿ. ವಿಶ್ವನಾಥ್ ಮಾತನಾಡಿದರು. ಗ್ರೇಡ್ -2 ತಹಸೀಲ್ದಾರ್ ಸಿಬ್ಬತ್ತುಲ್ಲಾ, ಮಂಜುನಾಥ್, ಡಾ. ಹೇಮಂತ್ ರಾಜ್, ಕಾರ್ಗಿಲ್ ಲಕ್ಷ್ಮೀನಾರಯಣ ಇದ್ದರು.
ಚಿನ್ನಾಭರಣ ಕಳವು
ಮಾಲೂರು: ಬ್ರಾಹ್ಮಣರ ಬೀದಿಯ ಮನೆಯೊಂದರಲ್ಲಿ ಕಳ್ಳತನ ನಡೆದಿದ್ದು, ಚಿನ್ನಾಭರಣ ಸೇರಿದಂತೆ 50 ಸಾವಿರ ರುಪಾಯಿ ನಗದು ದೋಚಿರುವ ಘಟನೆ ನಡಿದಿದೆ. ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿ ಮಠದ ರಸ್ತೆಯ ಪುರೋಹಿತ ನಾಗರಾಜ್ ಅಯ್ಯಂಗಾರ್ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಮನೆಯ ಮುಂಬಾಗಿಲ ಚಿಲಕ ಮೀಟಿರುವ ಕಳ್ಳರು ಕೋಣೆಯಲ್ಲಿದ್ದ ಬೀರುವನ್ನು ಒಡೆದು ಅದರಲ್ಲಿದ್ದ 61 ಗ್ರಾಂ ಚಿನ್ನ, 3.5 ಕೆ.ಜಿ. ಬೆಳ್ಳಿ ಹಾಗೂ 50 ಸಾವಿರ ರು.ನಗದನ್ನು ದೋಚಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಇನ್ಸ್ಪೆಕ್ಟರ್ ಟಿ.ಕೆ. ಶಿವುಕುಮಾರ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.