ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶಾಲೆ ನೂತನ ಕಟ್ಟಡಕ್ಕೆ ಶಿಲಾನ್ಯಾಸ

Rashmi Kasaragodu
Updated On : 11 Nov 2013, 12:51 pm

ಕೋಲಾರ: ಮಕ್ಕಳಲ್ಲಿ ಮೌಲ್ಯಗಳನ್ನು ತುಂಬಿ ದೇಶಭಕ್ತಿ ಮೂಡಿಸುವ ಮೂಲಕ ಸಮಾಜಕ್ಕೆ ಸತ್ಪ್ರಜೆಗಳನ್ನು ಕೊಡುಗೆಯಾಗಿ ನೀಡುವಂತೆ ಚಿನ್ಮಯ ಮಿಷನ್ ಮುಖ್ಯಸ್ಥರಲ್ಲಿ ಒಬ್ಬರಾದ ಸ್ವಾಮಿ ಬ್ರಹ್ಮಾನಂದ ಅವರು ಶಿಕ್ಷಕರಿಗೆ ಮತ್ತು ಪೋಷಕರಿಗೆ ಕರೆ ನೀಡಿದರು. ನಗರದ ಚಿನ್ಮಯ ವಿದ್ಯಾಲಯದ ಆವರಣದಲ್ಲಿ ನೂತನ ಸಂಕಿರಣದ ಶಂಕುಸ್ಥಾಪನೆ ಹಾಗೂ ಶಾಲೆಯಲ್ಲಿ ಕಲಾ-ವಿಜ್ಞಾನ ವಸ್ತುಪ್ರದರ್ಶನ- ಪರಿವರ್ತನೆ 2013-14 ಉದ್ಘಾಟಿಸಿ ಅವರು ಮಾತನಾಡಿ, ಅನೇಕ ಮಹನೀಯರು ತಮ್ಮ ದೂರದೃಷ್ಟಿಯಿಂದ ಅನೇಕ ಉತ್ತಮ ಕಾರ್ಯಗಳನ್ನು ಕೈಗೊಳ್ಳುವರು. ಅವುಗಳಲ್ಲಿ ಶಾಲೆಗಳ ಸ್ಥಾಪನೆಯೂ ಒಂದು. ಶಾಲೆಗಳು ಸಮಾಜದಲ್ಲಿ ಸಾಕ್ಷರತೆ ಮೂಡಿಸುವುದರ ಜೊತೆಗೆ ಸಾಮಾಜಿಕ ಕಾಳಜಿಯುಳ್ಳ ಮನಸ್ಸುಗಳನ್ನು ಕೊಡುಗೆಯಾಗಿ ನೀಡುತ್ತವೆ ಎಂದು ಪ್ರತಿಪಾದಿಸಿದರು. ಶಾಲೆ ಸತ್ಪ್ರಜೆಗಳನ್ನು ರೂಪಿಸುವ ಹೊಣೆ ಹೊಂದಿದ್ದು, ಅಲ್ಲಿ ಮಕ್ಕಳಿಗೆ ಅಗತ್ಯವಾದ ರಾಷ್ಟ್ರೀಯ ಮನೋಭಾವ ಬಿತ್ತುವ ಕೆಲಸ ನಡೆಯಬೇಕು, ಈ ಮಕ್ಕಳು ವೈಜ್ಞಾನಿಕ ಪ್ರಪಂಚದಲ್ಲಿ ದೇಶ, ಸಮಾಜಕ್ಕೆ ಕೊಡುಗೆಯಾಗಿರುವಂತಿರಬೇಕು ಎಂದರು. ನೂತನ ಕಟ್ಟಡ ಮುಂದೆ ಬೃಹದಾಕಾರವಾಗಿ ಬೆಳೆದು ಅನೇಕ ವಿದ್ಯಾರ್ಥಿಗಳಿಗೆ ದಾರಿದೀಪವಾಗಲಿ, ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಕೊಡುಗೆ ನೀಡಲಿ ಎಂದು ಹಾರೈಸಿದರು. ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮಕ್ಕಳು ಕಲೆ, ವಿಜ್ಞಾನ, ಭಾಷೆ, ಸಂಗೀತ, ಚಿತ್ರಕಲೆ ಇನ್ನೂ ಹತ್ತು ಹಲವಾರು ಕ್ಷೇತ್ರಗಳಲ್ಲಿ ನರ್ಸರಿ, ಪ್ರಾಥಮಿಕ, ಪ್ರೌಢ ಶಾಲೆಗಳ ಮಾದರಿಗಳು, ನಕಾಶೆಗಳನ್ನು ತಯಾರಿಸಿದ್ದರು.  ಪೋಷಕರು, ವಿವಿಧ ಶಾಲೆಗಳ ಮಕ್ಕಳು ವಸ್ತು ಪ್ರದರ್ಶ್ಶನ ವೀಕ್ಷಿಸಿದರು. ಸ್ವಾಮಿ ಬ್ರಹ್ಮಾನಂದರು ಮಕ್ಕಳಿಗೆ ಕೆಲವು ಪ್ರಶ್ನೆಗಳನ್ನು ಹಾಕಿ ಉತ್ತರ ಕಂಡುಕೊಂಡರಲ್ಲದೆ ಮಕ್ಕಳಲ್ಲಿನ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ವಾಮಿ ಕೃತಾತ್ಮಾನಂದ, ಸ್ವಾಮಿ ರಮಾತ್ಮಾನಂದ, ಚಿನ್ಮಯ ಮಿಷನ್ ಜಿಲ್ಲಾ ಅಧ್ಯಕ್ಷ ಸೋಮೇಶ್ವರಯ್ಯ, ಉಪಾಧ್ಯಕ್ಷ ಹರೀಶ್ ಇದ್ದರು.
ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ
ಗುಡಿಬಂಡೆ: ಪಟ್ಟಣದ ಎ ಬ್ಲಾಕ್ಗೆ ಸೇರಿದ ವಿನಾಯಕ ನಗರದಲ್ಲಿ ರಾಜಕಾಲುವೆ ಮೇಲೆ ನಿರ್ಮಿಸಿದ್ದ ಅನಧೀಕೃತ ಕಟ್ಟಡಗಳನ್ನು ಪಪಂ ಅಧಿಕಾರಿಗಳು ಶುಕ್ರವಾರ ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಿದರು. ಈ ವೇಳೆ ಮಾತನಾಡಿದ ಮುಖ್ಯಾಧಿಕಾರಿ ಶ್ರೀರಾಮರೆಡ್ಡಿ, ಜಿಲ್ಲಾಧಿಕಾರಿಗಳು ಹಾಗೂ ಆಡಳಿತಾಧಿಕಾರಿಗಳ ಆದೇಶದ ಮೇರೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸರ್ಕಾರಿ ಆಜ್ಞೆ ಪ್ರಕಾರ ರಾಜಕಾಲುವೆ ಅತಿಕ್ರಮಿಸಿ ಯಾವುದೇ ಕಟ್ಟಡ  ನಿರ್ಮಿಸುವಂತಿಲ್ಲ. ಆದರೆ ಕೆಲವರು ನಿರ್ಮಿಸಿದ್ದಾರೆ. ಇವುಗಳನ್ನು ಹಂತ ಹಂತವಾಗಿ ತೆರವುಗೊಳಿಸಿ ರಾಜಕಾಲುವೆಯನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು. ಕಾರ್ಯಾಚರಣೆ ವೇಳೆ ಗುತ್ತಿಗೆದಾರ ಲಕ್ಷ್ಮೀಪತಿ, ಸಿಬ್ಬಂದಿ ಮುನಿಕೃಷ್ಣ, ಅಶ್ವತ್ಥಪ್ಪ, ನರಸಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement