ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸಮಾಜದ ಅಭಿವೃದ್ಧಿಗೆ ಶಿಕ್ಷಕರ ಪಾತ್ರ ಪ್ರಮುಖ

Rashmi Kasaragodu
Updated On : 11 Nov 2013, 12:51 pm

ಚಿಂತಾಮಣಿ: ಸಮಾಜದ ಅಭಿವೃದ್ಧಿಯಾಗಲು ಶಿಕ್ಷಕರ ಪ್ರಮುಖವೆಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಾದೀಶ ವಿ. ಗೋಪಾಲಗೌಡರು ಹೇಳಿದರು.
ಪಟ್ಟಣದ ಮಹಾತ್ಮ ಗಾಂಧಿ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಎನ್.ಎಸ್. ರಾಮರಾವ್ ವೇದಿಕೆಯಲ್ಲಿ ಆಯೋಜಿಸಿದ್ದ ಗುರುವಂದನ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಮಾತನಾಡಿದರು. ಶಿಕ್ಷಣ ಕಾಶಿಯೆಂದೇ ಪ್ರಸಿದ್ಧಿ ಹೊಂದಿರುವ ಮಹಾತ್ಮ ಗಾಂಧಿ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಸಾವಿರಾರು ಹಳೇ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡಿ ದೇಶ ವಿದೇಶಗಳಲ್ಲಿ ಉನ್ನತ ವ್ಯಕ್ತಿಗಳಾಗಲು ಶ್ರಮ ವಹಿಸಿದ ಶಿಕ್ಷಕರ ಪಾತ್ರ ಮುಖ್ಯವೆಂದು ಹೇಳಿದರು.
ಉಚ್ಚನ್ಯಾಯಾಲಯದ ನ್ಯಾಯಾದೀಶ ಎಚ್. ಎನ್. ನಾಗಮೋಹನದಾಸ್, ನಿವೃತ್ತ ಪ್ರಾಂಶುಪಾಲ ಅ.ರಾ. ಮಿತ್ರ ಹಾಗೂ ಅಧ್ಯಕ್ಷತೆ ವಹಿಸಿದ್ದ ಡಿಡಿಪಿಐ ಅಧಿಕಾರಿ ಎ.ಅಜಿತ್ ಪ್ರಸಾದ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಗುರುವಂಧನ ಕಾರ್ಯಕ್ರಮದಲ್ಲಿ ವಿಶೇಷ ಸೇವೆ ಸಲ್ಲಿಸಿದ ಎಂ.ಎನ್. ಶ್ರೀಹರಿ, ಎಸ್.ಆರ್. ವೆಂಕಟನಾರಾಯಣರಾವ್, ಸೈಯದ್ ರಸೂಲ್, ಬಿ.ಆರ್. ಸುಂದರರಾಮ್, ಅನಂತಾಚಾರ್, ವೈ.ನಾರಾಯಣಶರ್ಮ, ವಿ. ವೆಂಕಟರೆಡ್ಡಿ, ಎಚ್.ಎನ್. ನಾಗಲಿಂಗಾರೆಡ್ಡಿ, ಎ. ವಿಕ್ಟರ್,ಅಬ್ದುಲ್ ಅಜೀಜ್, ಸುಬ್ಬರಾಮಶಾಸ್ತ್ರಿ, ಖಾದರ್ ಅಲಿಖಾನ್, ಚಾನ್ ಪಾಷಾ, ನಾಗಭೂಷಣರಾವ್ರನ್ನು ಸನ್ಮಾನಿಸಲಾಯಿತು. ಎಂ.ವಿ. ಅಣ್ಣಯ್ಯ, ಪುಷ್ಪರಾಮಮೋಹನ್, ನರಸಿಂಹಸ್ವಾಮಿ, ಗೋಪಾಲಸ್ವಾಮಿ, ಬಷೀರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement