ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಆರೋಗ್ಯವಂತ ಮಕ್ಕಳ ಸ್ಪರ್ಧೆಯಲ್ಲಿ ಧ್ಯಾನ್‌ಗೆ ಬೆಸ್ಟ್ ಬೇಬಿ ಪ್ರಶಸ್ತಿ

Vishwanath S
Updated On : 16 Nov 2013, 12:55 pm

ಕೋಲಾರ: ಆರೋಗ್ಯವಂತ ಮಕ್ಕಳ ಸ್ಪರ್ಧೆಯಲ್ಲಿ ನಗರದ 2 ವರ್ಷದ ಧ್ಯಾನ್ ಬೆಸ್ಟ್ ಬೇಬಿಯಾಗಿ ಪ್ರಶಸ್ತಿ ಪಡೆದುಕೊಂಡಿತು.
ನಗರದ ಟೇಕಲ್ ರಸ್ತೆಯಲ್ಲಿರುವ ನವರತ್ನ ನರ್ಸಿಂಗ್ ಹೊಂನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ರೋಟರಿ ಸಂಸ್ಥೆ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಆರೋಗ್ಯವಂತ ಮಕ್ಕಳ ಸ್ಪರ್ಧೆ ಕಡ್ಡಾಯ ಸ್ತನ್ಯಪಾನ ಕಾಯಿದೆ ಹಾಗೂ ಮಕ್ಕಳಲ್ಲಿ ಅಪೌಷ್ಟಿಕತೆ ಕುರಿತು ಕಾನೂನು ಅರಿವು ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಸುಮಾರು 50 ಮಕ್ಕಳು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಮೂರು ತಿಂಗಳಿನಿಂದ 1 ವರ್ಷದ ಒಳಗಿನ ಮಕ್ಕಳಲ್ಲಿ ಮೊದಲ ಪ್ರಶಸ್ತಿ ರಮ್ಯ-ನಾಗೇಂದ್ರ ಅವರ ಪುತ್ರ 11 ತಿಂಗಳ ನಿಶಾಲ್, ದ್ವಿತೀಯ ಪ್ರಶಸ್ತಿ ಸ್ವಪ್ನ-ಮಂಜುನಾಥ್ ಅವರ ಒಂದು ವರ್ಷದ ಪುತ್ರಿ, ತೃತೀಯ ಪ್ರಶಸ್ತಿಯನ್ನು ಸುಧಾರಾಣಿ-ಶ್ರೀನಿವಾಸ್ ಅವರ 3 ತಿಂಗಳ ಮಗು, ಸಮಾಧಾನಕರ ಪ್ರಶಸ್ತಿಯನ್ನು ಅರ್ಚನಾ-ಕೆ.ಎಸ್. ಸತೀಶ್ ಅವರ 11 ತಿಂಗಳ ಪುತ್ರ ಸೂರಜ್ ಹಾಗೂ ವರಲಕ್ಷ್ಮಿ-ಪ್ರಸಾದ್ ಕುಮಾರ್ ಅವರ 7 ತಿಂಗಳ ಮಗು. 1 ರಿಂದ 2 ವರ್ಷದ ಒಳಗಿನ ಮಕ್ಕಳಲ್ಲಿ ಸುಗುಣ-ಸಿ.ಜಿ. ಸತೀಶ್ ಇವರ ಪುತ್ರ ಸುಮನ್ ಪ್ರಥಮ, ಸುನಿತ-ಬಿ.ಎನ್. ಗಿರೀಶ್ ಕುಮಾರ್ ಪುತ್ರ ಹೇಮನ್ ದ್ವಿತೀಯ, ಶಬಾನಾ ತಾಜ್- ಅಂಜಾದ್ ಇವರ ಪುತ್ರಿ ಅರ್ಶಿಯಾ ತಬಸಂ-ತೃತೀಯ.
2 ರಿಂದ 3ವರ್ಷದ ಒಳಗಿನ ಮಕ್ಕಳಲ್ಲಿ ವಾಣಿಶ್ರೀ-ಕೆ.ಎಚ್. ಅಭಿಲಾಶ್ ಇವರ ಪುತ್ರ ದ್ಯಾನ್ ಪ್ರಥಮ, ರೋಹಿಣಿ ಬಿ. ಶೆಟ್ಟಿ- ಹನೀಶ್ ಶೆಟ್ಟಿ ಇವರ ಪುತ್ರ ಆಯುಶ್ ದ್ವಿತೀಯ, ಪುಷ್ಪ-ಅಂಬರೀಶ್ ಇವರ ಪುತ್ರಿ ಲಿಖಿತ-ತೃತೀಯ. ಸರೋಜ-ಶಿವಾನಂದಕುಮಾರ್ ಇವರ ಪುತ್ರಿ ಅಭಿತ್, ಭಾಗ್ಯಲಕ್ಷ್ಮಿ- ಅಮರನಾರಾಯಣ್ ಇವರ ಪುತ್ರಿ ಉಷಾ ಸಮಾಧಾನಕರ ಪ್ರಶಸ್ತಿಯನ್ನು ಪಡೆದರು.
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಎಸ್. ರೇಣುಕಾ ಪ್ರಸಾದ್, ಪ್ರಧಾನ ಹಿರಿಯ ಸಿವಿಲ್‌ನ್ಯಾಯಾಧೀಶರು ಮತ್ತು ಸಿ.ಜೆ.ಎಂ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ವಿ. ರೇಣುಕಾ, ರೋಟರಿ ಸಂಸ್ಥೆಯ ಅಧ್ಯಕ್ಷ ಬಿ. ಗೋಪಾಲಕೃಷ್ಣರೆಡ್ಡಿ, ಕಾರ್ಯದರ್ಶಿ ಎಸ್. ಸತೀಶ್ ಕುಮಾರ್, ಸ್ವಾತಂತ್ರ್ಯ ಹೋರಾಟಗಾರ ಎನ್. ಪಾಪಣ್ಣ, ಮಕ್ಕಳ ತಜ್ಞ ಡಾ. ಮುರಳಿಮೋಹನ್, ಡಾ. ರಾಜೇಶ್ವರಿ, ಕಾರ್ಯಕ್ರಮದ ಸಂಘಟಕಿ ಡಾ.ಪಿ. ರತ್ನಮ್ಮ, ವಕೀಲ ಕೆ. ಧನರಾಜ್, ನಾಗಶೇಖರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement